ದೇಶದಲ್ಲಿ ಈಗಂತೂ ಕೊರೊನಾ ಲಸಿಕೆ ಅಭಿಯಾನ ಭರದಿಂದ ಸಾಗುತ್ತಿದೆ. 6 ಕೋಟಿಗೂ ಅಧಿಕ ಮಂದಿ ಈಗಾಗಲೇ ಕೊರೊನಾ ಲಸಿಕೆಯನ್ನ ಪಡೆದಿದ್ದಾರೆ. ಇಲ್ಲಿಯವರೆಗೆ ಕೊರೊನಾ ಲಸಿಕೆಯಿಂದಾಗಿ ಸಾವು ನೋವು ಉಂಟಾದ ಬಗ್ಗೆ ನಿಖರವಾಗಿ ವರದಿಯಾಗಿಲ್ಲ. ಆದರೆ ಕೆಲ ಜನರು ಲಸಿಕೆ ಪಡೆದ ಬಳಿಕ ಜ್ವರದಂತಹ ಸೈಡ್ ಎಫೆಕ್ಟ್ನಿಂದ ಬಳಲಿದ್ದಾರೆ.
ವಿಶ್ವ ಆರೋಗ್ಯ ಸಂಸ್ಥೆ ಲಸಿಕೆಗಳ ಸೈಡ್ ಎಫೆಕ್ಟ್ ಕುರಿತಾದ ಸಾರ್ವಜನಿಕ ಡಾಕ್ಯೂಮೆಂಟ್ ಒಂದನ್ನ ಜಾರಿ ಮಾಡಿದೆ. ಕೊರೊನಾ ಲಸಿಕೆ ಸ್ವೀಕರಿಸಿದ ಬಳಿಕ ಜೀವನ ಶೈಲಿ ಹೇಗಿರಬೇಕು ಅನ್ನೋದರ ಬಗ್ಗೆಯೂ ಇದರಲ್ಲಿ ಮಾಹಿತಿ ನೀಡಿದೆ.ಮೆಡಿಕಲ್ ಎಕ್ಸ್ಪರ್ಟ್ಸ್ ಪ್ರಕಾರ ನೀವು ಕೊರೊನಾ ಲಸಿಕೆ ಪಡೆದ ಕೆಲವೇ ದಿನಗಳಲ್ಲಿ ಟ್ಯಾಟೂ ಹಾಕಿಸಿಕೊಳ್ಳಬಾರದು. ಈ ರೀತಿ ಮಾಡುವ ಪ್ಲಾನ್ನಲ್ಲಿ ನೀವಿದ್ದರೆ ಒಮ್ಮೆ ವೈದ್ಯರನ್ನ ಭೇಟಿಯಾಗೋದು ಒಳ್ಳೇದು.
ಲಸಿಕೆ ತಯಾರಕರು ನೀಡಿರುವ ಮಾಹಿತಿ ಪ್ರಕಾರ ಕೊರೊನಾ ಲಸಿಕೆ ಪಡೆಯುವ ಎರಡು ವಾರಗಳ ಮೊದಲು ಹಾಗೂ ನಂತರ ಬೇರೆ ಯಾವುದೇ ಲಸಿಕೆಗಳನ್ನ ಪಡೆಯಲು ಹೋಗಬೇಡಿ. ಕೊರೊನಾ ಲಸಿಕೆ ಉಳಿದ ಲಸಿಕೆ ವಿರುದ್ಧ ಅಡ್ಡ ಪರಿಣಾಮ ಬೀರಬಲ್ಲದು.
ಕೊರೊನಾ ಲಸಿಕೆ ಪಡೆದ ಬಳಿಕ ಹೆಚ್ಚು ದೇಹದಂಡನೆ ಒಳ್ಳೆಯದಲ್ಲ. ಲಸಿಕೆ ಸ್ವೀಕರಿಸಿದ ಬಳಿಕ ದೇಹವನ್ನ ಹೈಡ್ರೇಟ್ ಮಾಡಬೇಕು. ರೋಗನಿರೋಧಕ ಶಕ್ತಿಯನ್ನ ಹೆಚ್ಚಿಸುವ ಕಾರ್ಯ ದೇಹದಲ್ಲಿ ನಡೆಯುತ್ತಿರುವ ವೇಳೆ ದೇಹಕ್ಕೆ ನೀರಿನ ಅವಶ್ಯಕತೆ ಇರುತ್ತೆ. ಹೀಗಾಗಿ ಆದಷ್ಟು ಹೆಚ್ಚೆಚ್ಚು ನೀರನ್ನ ಸೇವಿಸಿ.