ಡೊನಾಲ್ಡ್ ಟ್ರಂಪ್ ಅಮೆರಿಕಾ ಅಧ್ಯಕ್ಷ ಪದವಿ ತ್ಯಜಿಸಿ ಬಹುಕಾಲ ಕಳೆದರೂ ಅವರ ವಿಚಾರಗಳು ಮಾತ್ರ ಇನ್ನೂ ಚರ್ಚೆಗೆ ಗ್ರಾಸವಾಗುತ್ತಲೇ ಇವೆ. ಇದೀಗ ಅವರ ಮಾಜಿ ಅಂಗರಕ್ಷಕ ಗಂಭೀರವಾದ ಅಭಿಪ್ರಾಯವನ್ನು ಹೊರಹಾಕಿದ್ದು, ಚರ್ಚೆಯಲ್ಲಿದ್ದಾರೆ.
ಡೊನಾಲ್ಡ್ ಟ್ರಂಪ್ ತಮ್ಮ ಕಚೇರಿ ತೊರೆಯುತ್ತಿದ್ದಂತೆ ಅವರ ಆತ್ಮೀಯ ಬಳಗದಲ್ಲಿದ್ದ ಅನೇಕರು ಟ್ರಂಪ್ ಬಗ್ಗೆ ಅಭಿಪ್ರಾಯಗಳನ್ನು ಹೊರಹಾಕಿದ್ದರು.
ಕೆವಿನ್ ಮೆಕೆ ಎಂಬಾತ ಟ್ರಂಪ್ ಜತೆ ಕೆಲಸ ಮಾಡಿದ್ದಾತ. 2012ರಲ್ಲಿ ಆತ ಸೇವೆಯಿಂದ ವಜಾಗೊಂಡಿದ್ದ. ಆದಾಗ್ಯೂ, ಟ್ರಂಪ್ ಕುರಿತ ಆತನ ಗೋಳು ನಿಂತಿಲ್ಲ.
ವೃದ್ಧ ದಂಪತಿಗೆ ಕೆಳಗಿನ ಬರ್ತ್ ನೀಡದ ರೈಲ್ವೆ ಇಲಾಖೆಗೆ 3 ಲಕ್ಷ ರೂ. ದಂಡ
ಮೆಕ್ಡೊನಾಲ್ಡ್ಸ್ ಬರ್ಗರ್ ಖರೀದಿಸಲು ತನ್ನ ಅಂಗರಕ್ಷಕರಿಂದ 130 ಡಾಲರ್ ಸಾಲ ಪಡೆದಿದ್ದರಂತೆ, ಆ ಹಣ ಹಿಂದಿರುಗಿಸಿಲ್ಲ ಎಂಬುದು ಆತನ ಆರೋಪ
2008ರಲ್ಲಿ ಸ್ಕಾಟ್ಲ್ಯಾಂಡ್ ಪ್ರವಾಸದಲ್ಲಿದ್ದಾಗ ಟ್ರಂಪ್ಗೆ ಯುಕೆ ಕರೆನ್ಸಿ ಕೈಯಲ್ಲಿ ಇಲ್ಲದ ಕಾರಣ ಈ ಸಾಲ ಪಡೆಯುವ ಪ್ರಸಂಗ ಬಂದಿತ್ತಂತೆ. ಕೆವಿನ್ ಗೆ ಬರ್ಗರ್ ಖರೀದಿಸಲು ಟ್ರಂಪ್ ಕೇಳಿಕೊಂಡರಂತೆ. ಟ್ರಂಪ್ ಈ ಹಣ ಹಿಂತಿರುಗಿಸುವ ಗೋಜಿಗೆ ಹೋಗಲಿಲ್ಲ.
ಆತ ಹಣ ಹಿಂದಿರುಗಿಸುವುದಾಗಿ ಹೇಳಿದ್ದ, ಆದರೆ ಅವನು ಎಂದಿಗೂ ಆ ಕೆಲಸ ಮಾಡಲಿಲ್ಲ. ಆತ ಮಾತಿನ ಮೇಲೆ ನಿಲ್ಲವ ಮನುಷ್ಯನಲ್ಲ ಎಂದು ಕೂಡ ಕೆವಿನ್ ಸ್ಥಳೀಯ ಮಾಧ್ಯಮಕ್ಕೆ ಅಭಿಪ್ರಾಯ ನೀಡಿದ್ದಾನೆ.