alex Certify ಆರೋಪಿಗೆ ಸರ್ಕಾರದ ಶ್ರೀರಕ್ಷೆ, ಸಂತ್ರಸ್ತೆಗೆ ವಿಚಾರಣೆಯ ಶಿಕ್ಷೆ; ರಾಜ್ಯ ಸರ್ಕಾರದ ವಿರುದ್ಧ ಕಾಂಗ್ರೆಸ್ ಆಕ್ರೋಶ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಆರೋಪಿಗೆ ಸರ್ಕಾರದ ಶ್ರೀರಕ್ಷೆ, ಸಂತ್ರಸ್ತೆಗೆ ವಿಚಾರಣೆಯ ಶಿಕ್ಷೆ; ರಾಜ್ಯ ಸರ್ಕಾರದ ವಿರುದ್ಧ ಕಾಂಗ್ರೆಸ್ ಆಕ್ರೋಶ

ಬೆಂಗಳೂರು: ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಕಿಡಿ ಕಾರಿರುವ ಕಾಂಗ್ರೆಸ್, ಬಿಜೆಪಿ ಆಡಳಿತ ತುಘಲಕ್ ದರ್ಬಾರ್ ಇದ್ದಂತೆ ಎಂದು ವಾಗ್ದಾಳಿ ನಡೆಸಿದೆ.

ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಟ್ವಿಟರ್ ನಲ್ಲಿ ಗುಡುಗಿರುವ ಕಾಂಗ್ರೆಸ್, ಇಲ್ಲಿ ಆರೋಪಿಗೆ ಸರ್ಕಾರದ ಶ್ರೀರಕ್ಷೆ, ಸಂತ್ರಸ್ತೆಗೆ ವಿಚಾರಣೆಯ ಶಿಕ್ಷೆ ನೀಡಲಾಗುತ್ತಿದೆ. ಆರೋಪಿ ಸರ್ಕಾರವನ್ನು ಬೆದರಿಸಿದ, ಸರ್ಕಾರ ಅಧಿಕಾರಿಗಳನ್ನು ಬೆದರಿಸಿತು ಎನ್ನುವುದು ಇದರಿಂದ ಸ್ಪಷ್ಟವಾಗುತ್ತದೆ. ಇನ್ನೊಂದೆಡೆ ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ ಎಂಬಂತೆ ಮಂತ್ರಿ, ಮನೆಗೆ ಕರೆಸಿ ಲಸಿಕೆ ಹಾಕಿಸಿಕೊಂಡರೆ, ಆರೋಗ್ಯಾಧಿಕಾರಿಗೆ ಅಮಾನತು ಶಿಕ್ಷೆ ನೀಡಲಾಗುತ್ತಿದೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ, ಆಡಳಿತ ಯಂತ್ರ ಸಂಪೂರ್ಣ ಕುಸಿದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದೆ.

ಈಗ ಈಶ್ವರಪ್ಪನವರಿಗೆ ತಲೆಕೆಟ್ಟಿದೆ – ಸಿಎಂ ಬದಲಾಗದಿದ್ದರೆ ಇನ್ನೂ ಹಲವರಿಗೆ ತಲೆ ಕೆಡಲಿದೆ: ಯತ್ನಾಳ್

ಸಾಮಾನ್ಯ ನಾಗರಿಕನೊಬ್ಬನ ಮೇಲೆ ಅತ್ಯಾಚಾರ ಆರೋಪದ ದೂರು ದಾಖಲಾದ ಮರುಕ್ಷಣವೇ ಪೊಲೀಸರು ಆತನನ್ನು ಹುಡುಕಿ ಬಂಧಿಸುತ್ತಾರಲ್ಲವೇ? ಅತ್ಯಾಚಾರ ಆರೋಪಿ ರಮೇಶ್ ಜಾರಕಿಹೊಳಿಯನ್ನೇಕೆ ಇನ್ನೂ ಬಂಧಿಸಲಿಲ್ಲ? ಮಂತ್ರಿಯಾದವರು ಕಾನೂನಿಗೆ ಅತೀತರೇ? ಅಥವಾ ನಿಮಗೆ ಬೇಕಾದಂತೆ ಕಾನೂನನ್ನು ಬದಲಿಸಿದ್ದೀರಾ? ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಅವರನ್ನು ಪ್ರಶ್ನಿಸಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...