ಬೇಕಾಗುವ ಸಾಮಗ್ರಿ : ಪಚ್ಚ ಬಾಳೆ ಹಣ್ಣು 4, ಸಕ್ಕರೆ – 6 ದೊಡ್ಡ ಚಮಚ, ಹಾಲು – 2 ಕಪ್, ಡ್ರೈ ಫ್ರೂಟ್ಸ್ – 2 ಚಮಚ, ಚಾಕೋ ಚಿಪ್ಸ್, ಚಾಕೊಲೆಟ್ ಸಿರಪ್ , ಚಾಕಲೇಟ್ ಐಸ್ ಕ್ರೀಂ
ಮಾಡುವ ವಿಧಾನ : ಜ್ಯೂಸರ್ ಜಾರ್ಗೆ ಬಾಳೆಹಣ್ಣು ಹಾಗೂ ಸಕ್ಕರೆ ಹಾಕಿ. ಇದಕ್ಕೆ 1 ಕಪ್ ಹಾಲನ್ನ ಹಾಕಿ. ಇದನ್ನ ರುಬ್ಬಿಕೊಳ್ಳಿ. ನುಣ್ಣಗೆ ರುಬ್ಬಿದ ಮಿಶ್ರಣಕ್ಕೆ ಚಾಕಲೇಟ್ ಐಸ್ಕ್ರೀಂ, ಚಾಕಲೇಟ್ ಸಿರಪ್, ಡ್ರೈ ಫ್ರೂಟ್ಸ್ ಹಾಗೂ ಮಿಕ್ಕಿದ ಹಾಲನ್ನ ಹಾಕಿ ರುಬ್ಬಿಕೊಳ್ಳಿ.
ಇದೀಗ ಗ್ಲಾಸ್ಗೆ ರೆಡಿ ಮಾಡಿದ ಮಿಶ್ರಣ ಮಾಡಿ. ಮೇಲಿನಿಂದ ಸ್ವಲ್ಪ ಐಸ್ಕ್ರೀಂ, ಡ್ರೈ ಫ್ರೂಟ್ಸ್ನಿಂದ ಅಲಂಕರಿಸಿ ಸರ್ವ್ ಮಾಡಿ.