ಆದಾಯ ತೆರಿಗೆ ಇಲಾಖೆ 2020-21ರ ಹಣಕಾಸು ವರ್ಷಕ್ಕೆ ಐಟಿ ರಿಟರ್ನ್ ಫಾರ್ಮ್ ಬಿಡುಗಡೆ ಮಾಡಿದೆ. ಕೇಂದ್ರ ತೆರಿಗೆ ಮಂಡಳಿ ಈ ಮಾಹಿತಿಯನ್ನು ನೀಡಿದೆ. ಹೊಸ ಐಟಿಆರ್, ಹಳೆ ಫಾರ್ಮ್ ಗೆ ಹೋಲಿಸಿದ್ರೆ ಹೆಚ್ಚು ಬದಲಾಗಿಲ್ಲ. ಆದಾಯ ತೆರಿಗೆ ಕಾಯ್ದೆ 1961 ರಲ್ಲಿನ ತಿದ್ದುಪಡಿ ಅಡಿಯಲ್ಲಿ ಕೆಲವು ಅಗತ್ಯ ಬದಲಾವಣೆಗಳನ್ನು ಮಾತ್ರ ಮಾಡಲಾಗಿದೆ.
ಹೊಸ ಐಟಿ ರಿಟರ್ನ್ ಫಾರ್ಮನ್ನು http://egazette.nic.in/WriteReadData/2021/226336.pdf ನಲ್ಲಿ ಪಡೆಯಬಹುದು. ಐಟಿಆರ್ ಫಾರ್ಮ್ 1 ಹಾಗೂ ಐಟಿಆರ್ ಫಾರ್ಮ್ 4 ತುಂಬ ಸುಲಭ ಫಾರ್ಮ್ ಆಗಿದೆ.
ಮಧ್ಯಮ ಹಾಗೂ ಸಣ್ಣ ತೆರಿಗೆದಾರರು ಇದನ್ನು ಬಳಸಬಹುದು. ವಾರ್ಷಿಕ 50 ಲಕ್ಷ ರೂಪಾಯಿ ಆದಾಯವಿದ್ದು, ಸಂಬಳ, ಮನೆ ಬಾಡಿಗೆ ಮತ್ತು ಬಡ್ಡಿಯಂತಹ ಮೂಲಗಳಿಂದ ಬರ್ತಿದ್ದರೆ ಅವರು ಸಹಜ್ ಫಾರ್ಮ್ ತುಂಬಬೇಕು. ಅವಿಭಾಜ್ಯ ಕುಟುಂಬದ ಜನರು ಸುಗಮ್ ಫಾರ್ಮ್ ಭರ್ತಿ ಮಾಡುತ್ತಾರೆ. ಕಂಪನಿಗಳು ಐಟಿಆರ್ 6 ಫಾರ್ಮ್ ಭರ್ತಿ ಮಾಡುತ್ತವೆ. ಆದಾಯ ತೆರಿಗೆ ಕಾಯ್ದೆಯಡಿ ವಿನಾಯಿತಿ ಪಡೆಯುವ ಟ್ರಸ್ಟ್ ಗಳು, ರಾಜಕೀಯ ಪಕ್ಷಗಳು ಮತ್ತು ದತ್ತಿ ಸಂಸ್ಥೆಗಳು ಐಟಿಆರ್ ಫಾರ್ಮ್ -7 ಅನ್ನು ಭರ್ತಿ ಮಾಡಬಹುದು.