ಮಿಸ್ಟರ್ ಬೀಸ್ಟ್ ಎಂದೇ ಖ್ಯಾತಿ ಪಡೆದಿರುವ ಯುಟ್ಯೂಬರ್ ಜಿಮ್ಮಿ ಡೊನಾಲ್ಡ್ಸನ್ ತಮ್ಮ ಸಾಹಸಮಯ ವಿಡಿಯೋಗಳ ಮೂಲಕ ಫುಲ್ ಫೇಮಸ್ ಆಗಿದ್ದಾರೆ.
ಈ ವ್ಯಕ್ತಿ ಮಾಡುವ ಕೆಲ ಸಾಹಸಗಳಂತೂ ಜೀವಕ್ಕೆ ಅಪಾಯ ತರುವಂತಿದ್ದರೂ ಸಹ ಕಡಿಮೆ ಅಂದರೂ 30 ಮಿಲಿಯನ್ ವೀವ್ಸ್ ಪಡೆಯುವಲ್ಲಿ ಯಶಸ್ವಿಯಾಗಿದೆ. ಕೆಲವೊಂದು 100 ಮಿಲಿಯನ್ಗಟ್ಟಲೇ ವೀವ್ಸ್ ಸಂಪಾದಿಸುತ್ತವೆ.
ಕೆಲ ಸಮಯದ ಹಿಂದಷ್ಟೇ ಈತ ಅಮೆರಿಕದ ನಗರವೊಂದರಲ್ಲಿ ಮಿಸ್ಟರ್ ಬೀಸ್ಟ್ ಬರ್ಗರ್ಸ್ ಎಂಬ ಫಾಸ್ಟ್ ಫುಡ್ ರೆಸ್ಟಾರೆಂಟ್ ತೆರೆದಿದ್ದರು. ತನ್ನ ರೆಸ್ಟಾರೆಂಟ್ಗೆ ಗ್ರಾಹಕರನ್ನ ಸೆಳೆಯುವ ಸಲುವಾಗಿ ಜನರಿಗೆ ಹಣ, ಐಪ್ಯಾಡ್ ಹಾಗೂ ಏರ್ಪೋಡ್ಸ್ ನೀಡುವ ಮೂಲಕ ಸುದ್ದಿಯಾಗಿದ್ದರು.
ಹದಿಹರೆಯದವರು ಸೈಬರ್ ವಂಚನೆಗೆ ಒಳಗಾಗುವ ಅಪಾಯ ಹೆಚ್ಚು: ಅಧ್ಯಯನ
ಇದೀಗ ಈ ವ್ಯಕ್ತಿ ಯುಟ್ಯೂಬ್ನಲ್ಲಿ ಶೇರ್ ಮಾಡಿದ ಸಾಹಸಮಯ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ 51 ಮಿಲಿಯನ್ಗೂ ಅಧಿಕ ವೀವ್ಸ್ ಸಂಪಾದಿಸಿದೆ. ಬರೋಬ್ಬರಿ 50 ಗಂಟೆಗಳ ಕಾಲ ಜೀವಂತ ಸಮಾಧಿಯಾಗುವ ಮೂಲಕ ಜಿಮ್ಮಿ ಸಾಹಸ ಮಾಡಿದ್ದಾರೆ.
ಬರೋಬ್ಬರಿ 2 ದಿನಗಳ ಕಾಲ ಜಿಮ್ಮಿ ಸಮಾಧಿಯೊಳಗೆ ಇದ್ದು ಎದ್ದು ಬರುವಲ್ಲಿ ಯಶಸ್ವಿಯಾಗಿದ್ದಾರೆ. ಸಮಾಧಿಯ ಒಳಗಡೆ ಕ್ಯಾಮರಾ ಇಡಲಾಗಿದ್ದು ವಿಡಿಯೋ ಚಿತ್ರೀಕರಿಸಿದೆ. ಸಮಾಧಿಯಿಂದ ಹೊರಬಂದ ಬಳಿಕ ಜಿಮ್ಮಿ ತಾನು ಪಟ್ಟ ಕಷ್ಟವನ್ನ ಎಳೆ ಎಳೆಯಾಗಿ ವಿವರಿಸಿದ್ದಾನೆ.