ಸಂಚಾರದಟ್ಟಣೆಯಿದ್ದ ರಸ್ತೆ ಮಧ್ಯದಲ್ಲಿ ನಿಂತಿದ್ದ ಶ್ವಾನದ ಪ್ರಾಣ ಕಾಪಾಡುವ ಸಲುವಾಗಿ ಟ್ರಾಫಿಕ್ನ್ನೂ ಲೆಕ್ಕಿಸದೇ ಬ್ಯಾಂಕಾಕ್ ಬಸ್ ಡ್ರೈವರ್ ಬಸ್ನ್ನು ನಿಲ್ಲಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಬಸ್ ಡ್ರೈವರ್ನನ್ನ ಟುಯೆನ್ ಪ್ರತುಮ್ಥಾಂಗ್ ಎಂದು ಗುರುತಿಸಲಾಗಿದೆ. ನಿರಾಶ್ರಿತ ನಾಯಿ ವಾಹನಗಳ ಮಧ್ಯೆಯೇ ಹೋಗುತ್ತಿದ್ದು ಪ್ರಾಣಾಪಾಯದಲ್ಲಿತ್ತು. ಹೀಗಾಗಿ ಟುಯೆನ್ ನಾಯಿಯ ಪ್ರಾಣ ರಕ್ಷಣೆಗೆ ಏನಾದರೂ ಮಾಡಬೇಕು ಎಂದು ಪ್ಲಾನ್ ಮಾಡಿದ್ರು. ಕೂಡಲೇ ರಸ್ತೆ ಮಧ್ಯ ದಲ್ಲೇ ಬಸ್ನ್ನ ನಿಲ್ಲಿಸಿ ಅದಕ್ಕೆ ರಸ್ತೆ ದಾಟಿಸಿದ್ದಾರೆ.
ಈ ಶ್ವಾನವು ತನ್ನ ಮಾಲೀಕನಿಂದ ತಪ್ಪಿಸಿಕೊಂಡು ಕಳೆದ ಮೂರು ದಿನಗಳಿಂದ ರಸ್ತೆಯಲ್ಲಿ ಅಲೆಯುತ್ತಿತ್ತು ಎನ್ನಲಾಗಿದೆ.
ಚಾಲಕ ಬಸ್ನ್ನು ನಿಲ್ಲಿಸುತ್ತಿದ್ದಂತೆಯೇ ನಿರ್ವಾಹಕ ಪ್ರಯಾಣಿಕರ ಬಳಿ ಹೋಗಿ ಚಾಲಕನ ನಿರ್ಧಾರದಿಂದ ಯಾರಿಗಾದರೂ ಕಿರಕಿರಿ ಉಂಟಾಗಿದೆಯೇ ಎಂದು ಪರಿಶೀಲಿಸಿದ್ದಾರೆ.
ಶ್ವಾನವನ್ನ ರಕ್ಷಿಸಿದ ಬಳಿಕ ಅದಕ್ಕೆ ಆಹಾರ ಹಾಗೂ ನೀರನ್ನ ನೀಡಲಾಯ್ತು. ಇದಾದ ಬಳಿಕ ಮಾಲೀಕೆಗೆ ಶ್ವಾನವನ್ನ ಹಸ್ತಾಂತರಿಸಲಾಗಿದೆ. ಚಾಲಕನ ಸಮಯ ಪ್ರಜ್ಞೆಯನ್ನ ಗೌರವಿಸಿದ ಮಹಿಳೆ ಬಹುಮಾನದ ರೂಪದಲ್ಲಿ ಹಣವನ್ನ ನೀಡಿದ್ದಾಳೆ. ಆದರೆ ಈ ಹಣವನ್ನ ಸ್ವೀಕರಿಸದ ಬಸ್ ಚಾಲಕ ಪ್ರಾಣಿ ದಯಾ ಸಂಘಕ್ಕೆ ದೇಣಿಗೆ ರೂಪದಲ್ಲಿ ಈ ನಗದನ್ನ ವರ್ಗಾಯಿಸಿದ್ದಾರೆ.