ಮದ್ಯಪಾನ ಮಾಡಿಕೊಂಡು ವಾಹನ ಚಲಾವಣೆ ಮಾಡೋದು ಅತ್ಯಂತ ಅಪಾಯಕಾರಿ. ಹೀಗಾಗಿಯೇ ಪೊಲೀಸರು ಅಲ್ಲಲ್ಲಿ ಚಾಲಕರು ಮದ್ಯಪಾನ ಮಾಡಿದ್ದಾರೋ ಇಲ್ಲವೋ ಎಂದು ಪರಿಶೀಲನೆ ಮಾಡುತ್ತಾರೆ.
ಮದ್ಯಪಾನ ಮಾಡಿದ್ದಾರೆಯೇ ಇಲ್ಲವೇ ಎಂದು ಪರೀಕ್ಷಿಸಲೆಂದೇ ಇರುವ ಸಾಧನದಲ್ಲಿ ಬಾಯಿಯಿಂದ ಊದಲು ಹೇಳುವ ಮೂಲಕ ಪೊಲೀಸರು ಡ್ರಂಕ್ & ಡ್ರೈವ್ ಪರೀಕ್ಷೆ ಮಾಡುತ್ತಾರೆ. ಇದರಲ್ಲಿ ಎಷ್ಟು ರೀಡಿಂಗ್ ತೋರಿಸುತ್ತದೆ ಎಂಬುದನ್ನ ಆಧರಿಸಿ ಪೊಲೀಸರು ದಂಡ ವಿಧಿಸಬಹುದು ಇಲ್ಲವೇ ಗಾಡಿಯನ್ನ ವಶಕ್ಕೆ ಪಡೆಯಬಹುದು.
ಆದರೆ ಇತ್ತೀಚಿಗೆ ಉತ್ತರ ಐರ್ಲೆಂಡ್ನ ವ್ಯಕ್ತಿಯೋರ್ವ ಬ್ರಿಟನ್ ಇತಿಹಾಸದಲ್ಲೇ ಅತ್ಯಂತ ಅಧಿಕ ಪ್ರಮಾಣದಲ್ಲಿ ಮದ್ಯಪಾನ ರೀಡಿಂಗ್ ದಾಖಲಿಸಿದ್ದಾನೆ. ಸಾಧನದಲ್ಲಿದ್ದ ರೀಡಿಂಗ್ನ್ನು ಕಂಡ ಪೊಲೀಸರೇ ಈತ ಇಷ್ಟೊಂದು ಪ್ರಮಾಣದಲ್ಲಿ ಮದ್ಯಪಾನ ಮಾಡಿ ಅದೇಗೆ ಕಾರು ಚಲಾಯಿಸಿದ ಎಂದು ಶಾಕ್ ಆಗಿದ್ದಾರೆ. ವ್ಯಕ್ತಿಯ ರೀಡಿಂಗ್ ನಾರ್ಮಲ್ ರೀಡಿಂಗ್ಗಿಂತ 5ಪಟ್ಟು ಹೆಚ್ಚು ಅಂದರೆ 180ರಷ್ಟಿತ್ತು.
ಮಾರ್ಚ್ 28ರಂದು ಟೋಬರ್ಮೋರ್ ರಸ್ತೆಯಲ್ಲಿ ಹಾವಿನಂತೆ ಚಲಿಸಿಕೊಂಡು ಬರ್ತಿದ್ದ ಕಾರನ್ನ ತಡೆಹಿಡಿದಿದ್ದರು. ಬ್ರೆತ್ಲೈಸರ್ನ್ನು ಚಾಲಕ ಊದಿದ ವೇಳೆ ಬಂದ ರೀಡಿಂಗ್ ನೋಡಿ ಪೊಲೀಸರು ಬೆಸ್ತು ಬಿದ್ದಿದ್ದಾರೆ. ಈತನನ್ನ ಪೊಲೀಸ್ ಠಾಣೆಗೆ ಕರೆದೊಯ್ಯಲಾಗಿದೆ.