alex Certify BIG NEWS: ತಮಿಳು ಚಿತ್ರರಂಗದ ಸೂಪರ್ ಸ್ಟಾರ್ ಕನ್ನಡಿಗ ರಜನಿಕಾಂತ್ ಗೆ ‘ದಾದಾ ಸಾಹೇಬ್ ಫಾಲ್ಕೆ’ ಪ್ರಶಸ್ತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ತಮಿಳು ಚಿತ್ರರಂಗದ ಸೂಪರ್ ಸ್ಟಾರ್ ಕನ್ನಡಿಗ ರಜನಿಕಾಂತ್ ಗೆ ‘ದಾದಾ ಸಾಹೇಬ್ ಫಾಲ್ಕೆ’ ಪ್ರಶಸ್ತಿ

ಸಿನಿರಂಗದ ಅತ್ಯುನ್ನತ ಗೌರವವಾದ 51ನೇ ದಾದಾ ಸಾಹೇಬ್​ ಫಾಲ್ಕೆ ಪ್ರಶಸ್ತಿಯನ್ನ ನಟ ರಜನಿಕಾಂತ್‌ ಅವರಿಗೆ  ನೀಡಲಾಗುವುದು ಎಂದು ಕೇಂದ್ರ ಸಚಿವ ಪ್ರಕಾಶ್​ ಜಾವಡೇಕರ್​​ ಮಾಹಿತಿ ನೀಡಿದ್ದಾರೆ.

ಈ ಸಂಬಂಧ ಟ್ವಿಟರ್​​ನಲ್ಲಿ ಮಾಹಿತಿ ನೀಡಿರುವ ಜಾವಡೇಕರ್​​ ‘ 2020ನೇ ಸಾಲಿನ ದಾದಾ ಸಾಹೇಬ್​ ಫಾಲ್ಕೆ ಪ್ರಶಸ್ತಿಗೆ ರಜನಿಕಾಂತ್​ರ ಹೆಸರನ್ನ ಘೋಷಿಸುತ್ತಿರೋದಕ್ಕೆ ಸಂತಸವಾಗುತ್ತಿದೆ. ನಟ, ನಿರ್ಮಾಪಕ ಹಾಗೂ ನಿರ್ದೇಶಕನಾಗಿ ಸಿನಿರಂಗಕ್ಕೆ ರಜನಿಕಾಂತ್ ನೀಡಿರುವ ಕೊಡುಗೆ ಅಪಾರ. ತೀರ್ಪುಗಾರರಾದ ಗಾಯಕಿ ಆಶಾ ಬೋಸ್ಲೆ, ನಿರ್ಮಾಪಕ ಸುಭಾಷ್​ ಘಾಯ್​, ನಟ ಮೋಹನ್​ಲಾಲ್​, ಗಾಯಕ ಶಂಕರ್​ ಮಹದೇವನ್​​ ಹಾಗೂ ಹಿರಿಯ ನಟ ಬಿಸ್ವಜೀತ್​ ಚಟರ್ಜಿಗೆ ಧನ್ಯವಾದಗಳು ಎಂದು ಬರೆದುಕೊಂಡಿದ್ದಾರೆ.

ಭಾರತ ಸಿನಿರಂಗದಲ್ಲೇ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಅಗ್ರಗಣ್ಯ ಗೌರವವಾಗಿದೆ. ಕೇಂದ್ರ ಮಾಹಿತಿ ಹಾಗೂ ಪ್ರಸಾರ ಸಚಿವಾಲಯದಿಂದ ಸ್ಥಾಪನೆಗೊಂಡ ಚಲನಚಿತ್ರ ನಿರ್ದೇಶನಾಲಯವು ವಾರ್ಷಿಕ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಈ ಗೌರವವನ್ನ ನೀಡುತ್ತದೆ. ಭಾರತೀಯ ಚಿತ್ರರಂಗದಲ್ಲಿ ಅಪ್ರತಿಮ ಸಾಧನೆಗೈದ ಖ್ಯಾತ ಕಲಾವಿದರಿಗೆ ಈ ಗೌರವವನ್ನ ನೀಡಲಾಗುತ್ತದೆ.

— Prakash Javadekar (Modi Ka Parivar) (@PrakashJavdekar) April 1, 2021

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...