ದೆಹಲಿಯ ಸರ್ ಗಂಗಾರಾಮ್ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ಕೈಗೊಂಡ ಬಳಿಕ 30 ವರ್ಷದ ಮಹಿಳೆ ತನ್ನ ಜೀವಮಾನದಲ್ಲೇ ಮೊಟ್ಟ ಮೊದಲ ಬಾರಿಗೆ ಸಂಪೂರ್ಣವಾಗಿ ಬಾಯಿ ತೆರೆಯುವಲ್ಲಿ ಯಶಸ್ವಿಯಾಗಿದ್ದಾಳೆ.
ಅಸ್ಥಾ ಮೊಂಗಿಯಾ ಎಂಬ ಮಹಿಳೆಗೆ ಜನಿಸಿದಾಗಿನಿಂದ ಬಾಯಿ ತೆರೆಯಲು ಸಾಧ್ಯವಾಗುತ್ತಿರಲಿಲ್ಲ. ಈಕೆಯ ಬಾಯಿ ಎಷ್ಟು ಕಡಿಮೆ ತೆರೆಯುತ್ತಿತ್ತು ಅಂದರೆ ಆಸ್ಥಾ ತನ್ನ ಬೆರಳುಗಳಿಂದ ನಾಲಿಗೆಯನ್ನ ಮುಟ್ಟಲೂ ಸಾಧ್ಯವಾಗುತ್ತಿರಲಿಲ್ಲ.
ಇದರಿಂದಾಗಿ ಕಳೆದ 30 ವರ್ಷಗಳಲ್ಲಿ ಆಸ್ಥಾ ಮಾತನಾಡುವ ಸಮಸ್ಯೆ ಹಾಗೂ ಗಟ್ಟಿ ಆಹಾರ ಪದಾರ್ಥಗಳನ್ನ ತಿನ್ನಲಾಗದೆ ಸಂಕಷ್ಟ ಅನುಭವಿಸುತ್ತಿದ್ರು ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.
ಅಸ್ಥಾರ ಮುಖದ ಬಲಭಾಗದಲ್ಲಿ ಗಡ್ಡೆಯೊಂದು ಬೆಳೆದಿತ್ತು. ಈ ಗಡ್ಡೆಯನ್ನ ತೆಗೆಯಲು ಭಾರತ, ದುಬೈ ಹಾಗೂ ಬ್ರಿಟನ್ನ ಪ್ರತಿಷ್ಠಿತ ಆಸ್ಪತ್ರೆಗಳು ಶಸ್ತ್ರಚಿಕಿತ್ಸೆ ಕೈಗೊಳ್ಳಲು ನಿರಾಕರಿಸಿದ್ದವು. ಆದರೆ ದೆಹಲಿಯ ಸರ್ ಗಂಗಾರಾಮ್ ಆಸ್ಪತ್ರೆ ಈ ಶಸ್ತ್ರಚಿಕಿತ್ಸೆಯನ್ನ ಯಶಸ್ವಿಯಾಗಿ ಮಾಡಿ ಮುಗಿಸಿದೆ.