ಟೀಮ್ ಇಂಡಿಯಾ ಓಪನರ್ ಶಿಖರ್ ಧವನ್, ಲೆಗ್ ಸ್ಪಿನ್ನರ್ ಯುಜ್ವೇಂದ್ರ ಚಾಹಲ್ ಅವರ ಪತ್ನಿ ಧನಶ್ರೀ ವರ್ಮಾ ಜೊತೆ ಭರ್ಜರಿ ಭಾಂಗ್ರಾ ಮಾಡಿದ್ದಾರೆ. ಕೆಲವೇ ಗಂಟೆಗಳ ಹಿಂದೆ ಧನಶ್ರೀ ವರ್ಮಾ ಈ ವಿಡಿಯೋವನ್ನು ಇನ್ಸ್ಟ್ರಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ.
ಈ ವಿಡಿಯೋದಲ್ಲಿ ಶಿಖರ್ ಧವನ್, ಧನಶ್ರೀ ಜೊತೆ ಡಾನ್ಸ್ ಮಾಡಿದ್ದಾರೆ. ಅಭಿಮಾನಿಗಳಿಗೆ ಈ ಡಾನ್ಸ್ ತುಂಬ ಇಷ್ಟವಾಗಿದೆ. ಕೆಲವೇ ಕೆಲವು ಗಂಟೆಯಲ್ಲಿ 1 ಲಕ್ಷಕ್ಕೂ ಹೆಚ್ಚು ಬಾರಿ ಈ ವಿಡಿಯೋ ವೀಕ್ಷಣೆ ಮಾಡಲಾಗಿದೆ. ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗ್ತಿದೆ.
ವಿಡಿಯೋ ಹಂಚಿಕೊಂಡ ಧನಶ್ರೀ, ಗಬ್ಬರ್ ಶೈಲಿಯಲ್ಲಿ ಭಾಂಗ್ರಾ ಎಂದು ಶೀರ್ಷಿಕೆ ಹಾಕಿದ್ದಾರೆ. ಇನ್ಸ್ಟ್ರಾಗ್ರಾಮ್ ರೀಲ್ ನಲ್ಲಿ ಈ ವಿಡಿಯೋ ಧಮಾಲ್ ಮಾಡ್ತಿದೆ. ಯುಜ್ವೇಂದ್ರ ಚಾಹಲ್ ಪತ್ನಿ ಧನಶ್ರೀ ವೃತ್ತಿಯಲ್ಲಿ ದಂತ ವೈದ್ಯೆ, ನೃತ್ಯ ಸಂಯೋಜಕಿ ಹಾಗೂ ಯೂಟ್ಯೂಬರ್. ಧನಶ್ರೀ ಯುಟ್ಯೂಬ್ ಚಾನೆಲ್ 15 ಲಕ್ಷಕ್ಕೂ ಹೆಚ್ಚು ಚಂದಾದಾರರನ್ನು ಹೊಂದಿದೆ. ಧನಶ್ರೀ, ಬಾಲಿವುಡ್ ಹಾಡುಗಳ ಜೊತೆ ಹಿಪ್ ಹಾಪ್ ಡಾನ್ಸ್ ತರಬೇತಿ ನೀಡುತ್ತಾರೆ.
https://www.instagram.com/p/CNErmHBJodY/?utm_source=ig_embed&utm_campaign=embed_video_watch_again