alex Certify ಫ್ರಾನ್ಸ್‌ ನ ಶೇ.96 ರಷ್ಟು ಪ್ರೌಢಶಾಲೆಗಳಲ್ಲಿದೆ ‌ʼಕಾಂಡೋಮ್ʼ‌ ವೆಂಡಿಂಗ್‌ ಮೆಷಿನ್…! ಇದರ ಹಿಂದಿದೆ ಈ ಕಾರಣ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಫ್ರಾನ್ಸ್‌ ನ ಶೇ.96 ರಷ್ಟು ಪ್ರೌಢಶಾಲೆಗಳಲ್ಲಿದೆ ‌ʼಕಾಂಡೋಮ್ʼ‌ ವೆಂಡಿಂಗ್‌ ಮೆಷಿನ್…! ಇದರ ಹಿಂದಿದೆ ಈ ಕಾರಣ

ಫ್ರಾನ್ಸ್​ನಲ್ಲಿ 96 ಪ್ರತಿಶತಕ್ಕಿಂತಲೂ ಹೆಚ್ಚಿನ ಪ್ರೌಢಶಾಲೆಗಳಲ್ಲಿ ಕಾಂಡೋಮ್​ ವಿತರಣಾ ಯಂತ್ರಗಳನ್ನ ಇರಿಸಲಾಗಿದೆ. ಲೈಂಗಿಕ ಶಿಕ್ಷಣ ಹಾಗೂ ಹೆಚ್​ಐವಿ ವಿರುದ್ಧದ ಸುರಕ್ಷತೆಯ ದೃಷ್ಟಿಯಿಂದ ಈ ಕ್ರಮ ಅನುಸರಿಸಲಾಗಿದ್ದು, 96 ಪ್ರತಿಶತಕ್ಕಿಂತಲೂ ಹೆಚ್ಚಿನ ಶಾಲೆಗಳು ಕಾಂಡೋಮ್​ ಯಂತ್ರಗಳನ್ನ ಸ್ಥಾಪಿಸಿವೆ.

ಇನ್ನು ಈ ವಿಚಾರವಾಗಿ ಮಾತನಾಡಿದ ಫ್ರಾನ್ಸ್​ ಶಾಲೆಯೊಂದರ ಮುಖ್ಯೋಪಾಧ್ಯಾಯ, ಅಸುರಕ್ಷಿತ ಗರ್ಭದಾರಣೆ ಹಾಗೂ ಹೆಚ್​ಐವಿ ಸೋಂಕಿನಿಂದ ವಿದ್ಯಾರ್ಥಿಗಳನ್ನ ರಕ್ಷಿಸುವ ಸಲುವಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳುತ್ತಾರೆ.

ಯುರೋಪಿಯನ್​ ರಾಷ್ಟ್ರದಲ್ಲಿ ಏಡ್ಸ್​ ರೋಗಕ್ಕೆ ತುತ್ತಾದವರ ಸಂಖ್ಯೆ ಅತಿಯಾಗಿದ್ದರ ಹಿನ್ನೆಲೆ 1992 ನವೆಂಬರ್​ ತಿಂಗಳಲ್ಲೇ ಮೊಟ್ಟ ಮೊದಲ ಬಾರಿಗೆ ಫ್ರಾನ್ಸ್​​ನ ಪ್ರೌಢಶಾಲೆಯೊಂದರಲ್ಲಿ ಕಾಂಡೋಮ್​ ಮಾರಾಟ ಯಂತ್ರವನ್ನ ಸ್ಥಾಪನೆ ಮಾಡಲಾಗಿತ್ತು.

ಫ್ರಾನ್ಸ್​ನಲ್ಲಿ ಕೈಗೊಳ್ಳಲಾದ ಈ ಕ್ರಮಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗ್ತಿದೆ. ಕೆಲ ನೆಟ್ಟಿಗರು ಹದಿಹರೆಯದ ಮಕ್ಕಳ ಆರೋಗ್ಯದ ದೃಷ್ಟಿಯಿಂದ ಈ ಕ್ರಮ ಸೂಕ್ತವಾದದ್ದು ಎಂದು ಅಭಿಪ್ರಾಯಪಟ್ಟಿದ್ದಾರೆ. ಇನ್ನು ಕೆಲವರು ಫ್ರಾನ್ಸ್​ನಲ್ಲಿ ಬಹುತೇಕ ಎಲ್ಲ ಕಡೆ ಕಾಂಡೋಮ್​ ಯಂತ್ರ ಲಭ್ಯವಿದೆ. ಗರ್ಭಧಾರಣೆಯ ವಿರುದ್ಧದ ಜಾಗೃತಿಗಾಗಿ ಬೇರೆ ಏನಾದರೂ ಸೂಕ್ತ ಕ್ರಮ ಹುಡುಕಬಹುದಿತ್ತು ಎಂದು ಹೇಳಿದ್ದಾರೆ. ಇನ್ನೂ ಹಲವರು ಫ್ರಾನ್ಸ್​ 2021ರ ಬದಲಾಗಿ 3021ನೇ ವರ್ಷಕ್ಕೆ ಕಾಲಿಟ್ಟಿದೆ ಎಂದು ವ್ಯಂಗ್ಯವಾಡಿದ್ದಾರೆ.

ಇತ್ತ ಭಾರತೀಯರು ಕೂಡ ಈ ವಿಚಾರವಾಗಿ ಪ್ರತಿಕ್ರಿಯಿಸಿದ್ದು, ಫ್ರಾನ್ಸ್​ನ ಪ್ರೌಢ ಶಾಲೆಗಳಲ್ಲಿ ಕಾಂಡೋಮ್​ ವಿತರಣಾ ಯಂತ್ರಗಳನ್ನ ಇಟ್ಟಂತೆಯೇ ಭಾರತದ ಶಾಲೆಗಳಲ್ಲಿ ಸ್ಯಾನಿಟರಿ ಪ್ಯಾಡ್​ಗಳ ವ್ಯವಸ್ಥೆ ಸಮರ್ಪಕವಾಗಿ ಸಿಗುವಂತೆ ಮಾಡಿ ಎಂದು ಹೇಳಿದ್ದಾರೆ.

https://twitter.com/UberFacts/status/1377174830965956617

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...