ರಸ್ತೆ ಬದಿ ಕಸ ಬಿಸಾಡಿದ ಭೂಪರಿಗೆ ಪೊಲೀಸರು ನೀಡಿದ ಶಿಕ್ಷೆ ಏನು ಗೊತ್ತಾ….? 31-03-2021 3:48PM IST / No Comments / Posted In: Latest News, International ರಸ್ತೆ ಬದಿಯಲ್ಲಿ ಕಸಗಳನ್ನ ಬಿಸಾಡೋದು ನಾಚಿಕೆಗೇಡಿನ ವಿಚಾರ ಅನ್ನೋದು ಎಲ್ಲರಿಗೂ ತಿಳಿದಿರೋದೆ. ಆದರೂ ಕೂಡ ಅನೇಕರು ಈ ದುರಾಭ್ಯಾಸವನ್ನ ಮಾತ್ರ ಬಿಡೋದಿಲ್ಲ. ಇಂತಹದ್ದೇ ಒಂದು ಪ್ರಕರಣ ಇಂಗ್ಲೆಂಡ್ನಲ್ಲೂ ನಡೆದಿದೆ. ಆದರೆ ಪೊಲೀಸರು ಕಸ ಬಿಸಾಡಿ ಕಾರಿನಲ್ಲಿ ತೆರಳಿದ್ದವರನ್ನ ವಾಪಾಸ್ ಅದೇ ಸ್ಥಳಕ್ಕೆ ಕರೆಸಿ ಅವರಿಂದಲೇ ಸ್ವಚ್ಛತಾ ಕಾರ್ಯ ಮಾಡಿಸಿದ್ದಾರೆ. ದುಷ್ಕರ್ಮಿಗಳು ಕಸ ಆಯುತ್ತಿರುವ ದೃಶ್ಯವನ್ನ ಪೊಲೀಸರು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದು ಸಖತ್ ವೈರಲ್ ಆಗಿದೆ. ಹೆದ್ದಾರಿ ಮೇಲ್ವಿಚಾರಣಾ ಇಲಾಖೆ ನೀಡಿದ ಸಿಸಿ ಟಿವಿ ದೃಶ್ಯಾವಳಿಗಳನ್ನ ಆಧರಿಸಿದ ಪೊಲೀಸರು ಆರೋಪಿಗಳಿಗೆ ವಾಪಸ್ ಡ್ರೈವ್ ಮಾಡಿಕೊಂಡು ಬರುವಂತೆ ಹೇಳಿ ಅವರೇ ಬಿಸಾಡಿದ್ದ ಕಸವನ್ನ ಆಯೋಕೆ ಹೇಳಿದ್ದಾರೆ. ದುಷ್ಕರ್ಮಿಗಳು ಪ್ಲಾಸ್ಟಿಕ್ ಚೀಲದಲ್ಲಿ ತಾವು ಬಿಸಾಡಿದ್ದ ವಸ್ತುಗಳನ್ನ ಆಯ್ದಿದ್ದಾರೆ. ಇನ್ನು ಈ ಘಟನೆ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕಮೆಂಟ್ ವಿಭಾಗದಲ್ಲಿ ಅನೇಕರು ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ರೆ ಇನ್ನೂ ಕೆಲವರು ಕಸ ಬಿಸಾಡಿದವರ ಗತಿ ಕಂಡು ನಕ್ಕಿದ್ದಾರೆ. M6 J12 to J13 a eagle eyed @HighwaysWMIDS who was monitoring the CCTV cameras notice the occupants of a Passat dumping rubbish in a ERA bay. We intercepted the vehicle M6 J14 to J15 and escorted them back clear their rubbish up. Details passed to @EnvAgency. 5419 pic.twitter.com/5tWwYYiaDZ — CMPG (@CMPG) March 28, 2021