ಈ ಫೋಟೋದಲ್ಲಿ ಕಾಣ್ತಿರುವ ಸ್ಟೆಫನಿ ನಾಸೆಲ್ಲೊ ಎಂಬ ಹೆಸರಿನ ಮಹಿಳೆ ಮೂರು ವರ್ಷ ವಯಸ್ಸಿನವಳಾಗಿದ್ದಾಗ ಮೊದಲ ಬಾರಿಗೆ ಒಂದು ಪುಟ್ಟ ಕುದುರೆ ಗೊಂಬೆಯನ್ನ ಖರೀದಿ ಮಾಡಿದ್ದರು. ಇಲ್ಲಿಂದ ಆರಂಭವಾದ ಕುದುರೆ ಗೊಂಬೆ ಸಂಗ್ರಹ ಇವರಿಗೆ 37 ವರ್ಷ ಆಗುವಷ್ಟರ ಹೊತ್ತಿಗೆ 4500 ಆಗಿದ್ದು, ಇವುಗಳ ಅಂದಾಜು ಮೊತ್ತ ಬರೋಬ್ಬರಿ 58 ಲಕ್ಷ ರೂಪಾಯಿ ಆಗಿದೆ.
ಸ್ಟೆಫನಿ ಮೊದಲ ಬಾರಿಗೆ ಕುದುರೆ ಗೊಂಬೆಯನ್ನ ಉಡುಗೊರೆಯಾಗಿ ಪಡೆದ ಬಳಿಕ ಅದರ ಮೇಲೆ ವಿಶೇಷ ಆಸಕ್ತಿ ಬೆಳೆಸಿಕೊಂಡ್ರು. ಇದೀಗ ಇವರ ಕೋಣೆಯ ತುಂಬೆಲ್ಲ ಆಟಿಕೆಯ ಸಂಗ್ರಹವಿದೆ. ಅಲ್ಲದೇ ಇವುಗಳನ್ನ ಕೋಣೆಯ ರ್ಯಾಕ್ಸ್ನಲ್ಲಿ ಒಪ್ಪವಾಗಿ ಇಡಲಾಗಿದೆ.
ಇವರು ಕುದುರೆ ಗೊಂಬೆಗಳನ್ನ ಆಟಿಕೆ ಸಾಮಗ್ರಿ ಅಂಗಡಿಗಳಲ್ಲಿ, ಸೆಕೆಂಡ್ ಹ್ಯಾಂಡ್ ಶಾಪ್ಗಳಲ್ಲಿ, ಗ್ಯಾರೇಜ್ ಮಳಿಗೆಗಳಲ್ಲಿ ಹಾಗೂ ಆಟಿಕೆ ಸಾಮಗ್ರಿಗಳನ್ನ ಮಾರಾಟ ಮಾಡುವ ವೆಬ್ಸೈಟ್ನಲ್ಲೂ ಖರೀದಿ ಮಾಡುತ್ತಾರೆ. ಇನ್ನು ಈ ಮಹಿಳೆ ಬಳಿ ಇರುವ ಅತ್ಯಮೂಲ್ಯ ಸಂಗ್ರಹವೆಂದರೆ ಗ್ರೀಕ್ ಮಿಂಟ್ ಆನ್ ಕಾರ್ಡ್ ಪೋನಿ, ಇದರ ಬೆಲೆ 33338.09 ರೂಪಾಯಿ ಆಗಿದೆ. ಸ್ಟೇಫಾನಿ ತಮ್ಮ ಆಟಿಕೆ ಸಂಗ್ರಹವನ್ನ ಮಾರಾಟ ಮಾಡುವ ಯಾವುದೇ ಉದ್ದೇಶ ಹೊಂದಿಲ್ಲ.