ಮಹಿಳೆಯೊಬ್ಬಳು ಲಾಂಗ್ ಹಿಡಿದು ಊರ ತುಂಬಾ ಅಡ್ಡಾಡಿದ್ದು, ಆಕೆಯನ್ನು ನೋಡಿ ಜನ ದಿಕ್ಕಾಪಾಲಾಗಿ ಓಡಿದ ಘಟನೆ ದಾವಣಗೆರೆ ಜಿಲ್ಲೆ ಚನ್ನಗಿರಿಯಲ್ಲಿ ನಡೆದಿದೆ.
34 ವರ್ಷದ ರುಕ್ಮಿಣಿ ಎಂಬ ಈ ಮಹಿಳೆ ಜೀನ್ಸ್ ಹಾಗೂ ಕೆಂಪು ಬಣ್ಣದ ಜೆರ್ಕಿನ್ ಧರಿಸಿದ್ದು, ‘ಜೋಗಿ’ ಸ್ಟೈಲ್ ನಲ್ಲಿ ಲಾಂಗ್ ಹಿಡಿದುಕೊಂಡು ಅಡ್ಡಾಡಿದ್ದಲ್ಲದೆ ಖಾಸಗಿ ಬಸ್ ಗಳ ಮೇಲೆ ಮಚ್ಚು ಬೀಸಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ಧೂಳೆಬ್ಬಿಸಿದೆ ಯುವಕನ ʼಮೂನ್ ವಾಕ್ʼ
ಕಡೆಗೆ ಸನಿಹದಲ್ಲಿದ್ದ ಆಟೋರಿಕ್ಷಾ ಚಾಲಕರು ಉಪಾಯವಾಗಿ ಲಾಂಗ್ ಕಸಿದುಕೊಂಡು ಮಹಿಳೆಯನ್ನು ಪೊಲೀಸರಿಗೆ ಹಸ್ತಾಂತರಿಸಿದ್ದಾರೆ. ಈ ಮಹಿಳೆ ಮೂಲತಃ ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲ್ಲೂಕಿನ ಚಿಕ್ಕಜಾಜೂರು ಗ್ರಾಮದ ನಿವಾಸಿಯಾಗಿದ್ದು, ಮಾನಸಿಕ ಅಸ್ವಸ್ಥೆ ಎನ್ನಲಾಗಿದೆ.
ಈ ಮಹಿಳೆ ಆಸ್ಪತ್ರೆಯಿಂದ ತಪ್ಪಿಸಿಕೊಂಡು ಬಂದು ಚನ್ನಗಿರಿಯಲ್ಲಿ ಅವಾಂತರ ಸೃಷ್ಟಿಸಿದ್ದು, ಇದೀಗ ಪೊಲೀಸರು ಮುಂದಿನ ಪ್ರಕ್ರಿಯೆ ಕೈಗೊಂಡಿದ್ದಾರೆ.