alex Certify 91ನೇ ಇಳಿವಯಸ್ಸಿನಲ್ಲೂ ಪೊಲೀಸ್​ ಇಲಾಖೆಯಲ್ಲಿ ಸೇವೆ..! ದಣಿವರಿಯದ ಅಧಿಕಾರಿಗೆ ಇಲ್ಲ ನಿವೃತ್ತಿ ಹೊಂದುವ ʼಪ್ಲಾನ್ʼ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

91ನೇ ಇಳಿವಯಸ್ಸಿನಲ್ಲೂ ಪೊಲೀಸ್​ ಇಲಾಖೆಯಲ್ಲಿ ಸೇವೆ..! ದಣಿವರಿಯದ ಅಧಿಕಾರಿಗೆ ಇಲ್ಲ ನಿವೃತ್ತಿ ಹೊಂದುವ ʼಪ್ಲಾನ್ʼ

ಸಾಮಾನ್ಯವಾಗಿ ಬಹುತೇಕ ರಾಷ್ಟ್ರಗಳಲ್ಲಿ ಪೊಲೀಸ್​​ ಅಧಿಕಾರಿಗಳಿಗೆ 60 ವರ್ಷವನ್ನ ನಿವೃತ್ತಿ ವಯಸ್ಸು ಎಂದು ಪರಿಗಣಿಸಲಾಗಿದೆ. ಕೆಲವೊಂದು ವಿಶೇಷ ಪ್ರಕರಣಗಳಲ್ಲಿ ಅಧಿಕಾರಿಗಳು 65 ವರ್ಷದವರೆಗೂ ಸೇವೆ ಸಲ್ಲಿಸಿದ ಉದಾಹರಣೆಗಳೂ ಇವೆ.

ಆದರೆ ಸ್ಮಿತ್​ ಎಂಬವರು ತಮ್ಮ ನಿವೃತ್ತಿ ಬಳಿಕವೂ ಹಲವು ವರ್ಷಗಳ ಕಾಲ ಇಲಾಖೆಗೆ ಸೇವೆಯನ್ನ ಸಲ್ಲಿಸಿದ್ದಾರೆ. 60ಕ್ಕೆ ನಿವೃತ್ತಿ ಪಡೆಯಬೇಕಿದ್ದ ಸ್ಮಿತ್​ ಹೆಚ್ಚುವರಿ 30 ವರ್ಷಗಳ ಸೇವೆ ಮಾಡಿದ್ದಾರೆ. ವಿಶೇಷ ಅಂದ್ರೆ ಸ್ಮಿತ್​ ಇನ್ನೂ ನಿವೃತ್ತಿ ಪಡೆಯುವ ಅಂದಾಜಿನಲ್ಲಿ ಇಲ್ವಂತೆ.

ಅಮೆರಿಕದ ಅರ್ಕಾನ್ಸಾಸ್​​ನಲ್ಲಿ ಡೆಪ್ಯೂಟಿ ಶೆರಿಫ್​​ ಆಗಿ ಸೇವೆ ಸಲ್ಲಿಸುತ್ತಿದ್ದ ಸ್ಮಿತ್​ 46 ವರ್ಷದ ಸೇವಾ ಅವಧಿ ಬಳಿಕ 60 ವರ್ಷ ತಲುಪಿದ್ದರಿಂದ ನಿವೃತ್ತಿ ಹೊಂದಿದ್ದರು. ಆದರೆ ನಿವೃತ್ತಿ ಜೀವನ ಸರಿಹೊಂದರ ಕಾರಣ ಕೆಲವೇ ತಿಂಗಳಲ್ಲಿ ಮತ್ತೆ ಸೇರ್ಪಡೆಯಾದ್ರು. ಮೇ ತಿಂಗಳಲ್ಲಿ ಸ್ಮಿತ್​ರ 92ನೇ ವರ್ಷದ ಜನ್ಮದಿನವಿದೆ. ಆದರೆ ಇನ್ನೂ ನಿವೃತ್ತಿ ಹೊಂದೋಕೆ ಮಾತ್ರ ಸ್ಮಿತ್​ ತಯಾರಿಲ್ಲ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...