alex Certify ಮಾನಸಿಕ ಒತ್ತಡದ ಬಗ್ಗೆ ಅಧ್ಯಯನದಲ್ಲಿ ಬಯಲಾಯ್ತು ಶಾಕಿಂಗ್​ ಸಂಗತಿ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಾನಸಿಕ ಒತ್ತಡದ ಬಗ್ಗೆ ಅಧ್ಯಯನದಲ್ಲಿ ಬಯಲಾಯ್ತು ಶಾಕಿಂಗ್​ ಸಂಗತಿ….!

ಮಾನಸಿಕ ಒತ್ತಡ ಅನ್ನೋದು ಮಾನಸಿಕವಾಗಿ ತುಂಬಾನೇ ಪರಿಣಾಮ ಬೀರಬಲ್ಲ ಸಮಸ್ಯೆ ಎಂದು ಎಲ್ಲರೂ ಹೇಳ್ತಾರೆ. ಆದರೆ ಇದೇ ಮೊದಲ ಬಾರಿಗೆ ಅಧ್ಯಯನವೊಂದು ಒತ್ತಡದ ಬಗ್ಗೆ ಒಂದೊಳ್ಳೆ ಫಲಿತಾಂಶವನ್ನ ನೀಡಿದೆ. ಈ ಸಮಸ್ಯೆಯಿಂದ ಮೆದುಳಿನ ಆರೋಗ್ಯ ವೃದ್ಧಿಯಾಗುತ್ತೆ ಎಂದು ಹೇಳಿದೆ ಈ ಹೊಸ ಅಧ್ಯಯನ.

ಇಲ್ಲಿಯವರೆಗೆ ಮಾನಸಿಕ ಒತ್ತಡದಿಂದಾಗಿ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಚರ್ಮದ ಸಮಸ್ಯೆ, ಜೀರ್ಣಕ್ರಿಯೆ ಸಮಸ್ಯೆ, ತಲೆ ನೋವು, ಆತಂಕ ಹೀಗೆ ನಾನಾ ಸಮಸ್ಯೆಗಳು ಉಂಟಾಗುತ್ತೆ ಎಂದೇ ಹೇಳಲಾಗುತ್ತಿತ್ತು. ಆದರೆ ಅಮೆರಿಕದ ಪೆನ್​ ಸ್ಟೇಟ್​ ಯೂನಿವರ್ಸಿಟಿ ನಡೆಸಿದ ಸಂಶೋಧನೆಯ ಅಡಿಯಲ್ಲಿ ಈ ಒತ್ತಡದ ಸಮಸ್ಯೆಗೆ ಹೊಸ ವ್ಯಾಖ್ಯಾನವೇ ದೊರಕಿದೆ. ಈ ಅಧ್ಯಯನದ ಪ್ರಕಾರ ಒಳ್ಳೆಯ ಆರೋಗ್ಯ ಬೇಕು ಅಂದರೆ ಜೀವನದಲ್ಲಿ ಒತ್ತಡ ಇರಬೇಕಂತೆ. ಹಾಗಾದ್ರೆ ಒತ್ತಡದಂತಹ ಸಮಸ್ಯೆಯನ್ನೇ ಕಾಣದವರ ಕತೆ ಏನು..? ಇದಕ್ಕೂ ಈ ಅಧ್ಯಯನದಲ್ಲಿ ಉತ್ತರ ಹುಡುಕಲಾಗಿದೆ.

ಜರ್ನಲ್​ ಎಮೋಷನ್​ನಲ್ಲಿ ಪ್ರಕಟಿಸಲಾದ ವರದಿಯಲ್ಲಿ, ಸುಮಾರು 2800 ಮಂದಿಯನ್ನ ಅಧ್ಯಯನಕ್ಕೆ ಒಳಪಡಿಸಲಾಗಿತ್ತು. ಮೊದಲು ಅವರಿಗೆ ಒಂದಷ್ಟು ಪರೀಕ್ಷೆಗಳನ್ನ ಮಾಡಲಾಯ್ತು. ಬಳಿಕ ಅವರ ಯೋಗ ಕ್ಷೇಮದ ಬಗ್ಗೆ ಸತತ 8 ರಾತ್ರಿ ಪರಿಶೀಲನೆ ನಡೆಸಲಾಯ್ತು. ಇದರಲ್ಲಿ ಒತ್ತಡದ ಸಮಸ್ಯೆ ಹೊಂದಿರದ ಗುಂಪಿನ 10 ಪ್ರತಿಶತ ಸದಸ್ಯರು ದೀರ್ಘಕಾಲದವರೆಗೆ ಆರೋಗ್ಯವನ್ನ ಕಾಪಾಡಿಕೊಳ್ಳಲಾಗೋದಿಲ್ಲ ಎಂದು ತಿಳಿದು ಬಂದಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...