ಕೊರೊನಾ ಸೋಂಕು ವಿದ್ಯಾರ್ಥಿಗಳಿಗೆ ಬರಬಾರದು ಅಂತಾ ಶಾಲೆ ಹಾಗೂ ಕಾಲೇಜುಗಳಲ್ಲಿ ಹೆಚ್ಚಿನ ಮುಂಜಾಗ್ರತೆಯನ್ನ ಕೈಗೊಳ್ಳಲಾಗ್ತಿದೆ. ಹೀಗಾಗಿ ಶಾಲೆ ಹಾಗೂ ಕಾಲೇಜುಗಳಲ್ಲಿ ಮಾಸ್ಕ್ ಧರಿಸೋದು, ಸಾಮಾಜಿಕ ಅಂತರ ಕಾಪಾಡೋದು ಸೇರಿದಂತೆ ಇನ್ನೂ ಹಲವು ಮಾರ್ಗಸೂಚಿಗಳನ್ನ ಪಾಲಿಸುವಂತೆ ಸೂಚನೆಗಳನ್ನ ನೀಡಲಾಗಿದೆ.
ಬ್ರಿಟನ್ನಲ್ಲಿ ಕೊರೊನಾ ಅಲೆ ತೀವ್ರವಾಗಿರೋದ್ರಿಂದ ಲಾಕ್ಡೌನ್ ಜಾರಿ ಮಾಡಿದ್ದರಿಂದ ಜನತೆಗೆ ಮನೆಯಿಂದ ಹೊರ ಬೀಳೋಕೂ ಅವಕಾಶ ಇರಲಿಲ್ಲ. ಹೀಗಾಗಿ ಪೋಷಕರು ಮನೆಯಲ್ಲಿ ತಾವೇ ಮಕ್ಕಳಿಗೆ ಕ್ಷೌರವನ್ನೂ ಮಾಡಿದ್ದಾರೆ. ಕ್ಷೌರಿಕನಷ್ಟು ಚೆನ್ನಾಗಿ ಹೇರ್ ಕಟ್ ಮಾಡೋಕೆ ಪೋಷಕರಿಗೆ ಬರೋದಿಲ್ಲ. ಹೀಗಾಗಿ ಮಕ್ಕಳ ಕೂದಲನ್ನ ಹೇಗೇಗೋ ಕತ್ತರಿಸಿದ್ದಾರೆ. ಆದರೆ ಕೆಲ ಶಾಲೆಗಳು ಇದನ್ನ ಅಶಿಸ್ತು ಎಂದು ಪರಿಗಣಿಸುತ್ತಿವೆ.
ಇಂತಹದ್ದೇ ಒಂದು ಪ್ರಕರಣದಲ್ಲಿ ಬ್ರಿಟನ್ನಲ್ಲಿ ತಾಯಿಯೊಬ್ಬರು ತನ್ನ ಮಗನ ಕೂದಲನ್ನ ತುಂಬಾ ಚಿಕ್ಕದಾಗಿ ಕತ್ತರಿಸಿದ್ದೇನೆ ಎಂಬ ಕಾರಣಕ್ಕೆ ಆತನನ್ನ ಶಾಲಾ ಆಡಳಿತ ಮಂಡಳಿ ಮೂರು ವಾರಗಳ ಐಸೋಲೇಷನ್ನಲ್ಲಿ ಇಟ್ಟಿದೆ ಎಂದು ಹೇಳಿದ್ದಾರೆ.
ಬ್ರಿಟನ್ನಲ್ಲಿ ಸಲೂನ್ಗಳು ಬಂದ್ ಆಗಿರೋದ್ರಿಂದ ನಿಯಾಲ್ಗೆ ಮನೆಯಲ್ಲಿಯೇ ಕ್ಷೌರ ಮಾಡಲಾಗಿತ್ತು. ಆತನ ತಾಯಿ ಹನ್ನಾ ಕ್ಲೀವ್ಸ್ ಆತನ ತಲೆಗೂದಲನ್ನ ಕತ್ತರಿಸಿದ್ದಳು. ಆದರೆ ಆಕೆ ಅದು ತನ್ನ ಮಗನ ವಿದ್ಯಾಭ್ಯಾಸಕ್ಕೆ ಅಡಚಣೆ ಉಂಟುಮಾಡಬಹುದೆಂದು ಊಹಿಸಿಯೂ ಇರಲಿಲ್ಲ.
ಆದರೆ ಸೇಂಟ್ ಮೈಕೆಲ್ಸ್ ಚರ್ಚ್ ಆಫ್ ಇಂಗ್ಲೆಂಡ್ ಹೈಸ್ಕೂಲ್ನಲ್ಲಿ ನಿಯಾಲ್ನನ್ನ ಪ್ರತ್ಯೇಕ ಕೊಠಡಿಯಲ್ಲಿ ಮೂರು ವಾರಗಳ ಕಾಲ ಇರಿಸಲಾಗಿತ್ತು ಎಂದು ತಾಯಿ ಆಕ್ರೋಶ ಹೊರಹಾಕಿದ್ದಾರೆ.