ಭಾರತ ಮತ್ತು ಇಂಗ್ಲೆಂಡ್ ನಡುವಿನ ಏಕದಿನ ಸರಣಿಯ ಕೊನೆಯ ಪಂದ್ಯದಲ್ಲಿ ಟೀಮ್ ಇಂಡಿಯಾ 7 ರನ್ ಗಳಿಂದ ಜಯಗಳಿಸಿದೆ. ಆದ್ರೆ ಈ ಗೆಲುವು ಸುಲಭವಾಗಿ ಸಿಗಲಿಲ್ಲ. ರೋಚಕ ಪಂದ್ಯದಲ್ಲಿ ಇಂಗ್ಲಿಷ್ ಆಲ್‌ರೌಂಡರ್ ಸ್ಯಾಮ್ ಕುರ್ರನ್ ಅದ್ಬುತ ಆಟ ಪ್ರದರ್ಶಿಸಿದ್ರು.
ಟೀಂ ಇಂಡಿಯಾಕ್ಕೆ ಗೆಲುವು ಸುಲಭವಾಗಿ ಸಿಗಲಿದೆ ಎಂಬ ನಿರೀಕ್ಷೆಯಲ್ಲಿದ್ದ ಅಭಿಮಾನಿಗಳಿಗೆ ಸ್ಯಾಮ್ ಗೋಡೆಯಾಗಿದ್ರು. ಸ್ಯಾಮ್ 83 ಎಸೆತಗಳಲ್ಲಿ 95 ರನ್ ಗಳಿಸುವ ಮೂಲಕ ಭಾರತೀಯ ಅಭಿಮಾನಿಗಳನ್ನು ತುದಿಗಾಲಿನಲ್ಲಿ ನಿಲ್ಲಿಸಿದ್ದರು. ಸ್ಯಾಮ್ ಅಜೇಯರಾಗಿದ್ದರೂ ಇಂಗ್ಲೆಂಡ್ ಗೆ ಗೆಲುವು ಸಿಗಲಿಲ್ಲ. ಪಂದ್ಯದ ಕೊನೆಯಲ್ಲಿ ಇಂಗ್ಲೆಂಡ್ ನಾಯಕ, ಸ್ಯಾಮ್ ರನ್ನು ಹೊಗಳುವ ಜೊತೆಗೆ ಸ್ಯಾಮ್ ಆಟವನ್ನು ಧೋನಿ ಆಟಕ್ಕೆ ಹೋಲಿಸಿದ್ರು.
ಕೊನೆ ಕ್ಷಣದಲ್ಲಿ ಧೋನಿ ಆಟವನ್ನು ಹೇಗೆ ರೋಮಾಂಚಕಗೊಳಿಸ್ತಾರೋ ಅದೇ ರೀತಿ ಸ್ಯಾಮ್ ಆಟವಿತ್ತು. ಐಪಿಎಲ್ ನಲ್ಲಿ ಸ್ಯಾಮ್, ಧೋನಿಯಿಂದ ಸಾಕಷ್ಟು ಕಲಿತಿದ್ದಾರೆ. ಸ್ಯಾಮ್ ರಿಂದ ನಾವು ಕಲಿಯುತ್ತೇವೆ. ಇಂಥ ಪರಿಸ್ಥಿತಿಯಲ್ಲಿ ಒಂಟಿಯಾಗಿ ಹೇಗೆ ಹೋರಾಡಬೇಕು ಎಂಬುದನ್ನು ಕಲಿಯಲು ಪ್ರಯತ್ನಿಸುತ್ತೇವೆಂದು ಜೋಸ್ ಬಟ್ಲರ್ ಹೇಳಿದ್ದಾರೆ.