ಬೆಂಗಳೂರು: ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ರಮೇಶ್ ಜಾರಕಿಹೊಳಿ ವಿಚಾರಣೆ ಅಂತ್ಯವಾಗಿದ್ದು, ತನಿಖಾಧಿಕಾರಿಗಳು ಕೇಳಿದ ಯಾವುದೇ ಪ್ರಶ್ನೆಗೆ ಉತ್ತರಿಸಲು ನಿರಾಕರಿಸಿದ್ದಾರೆ ಎನ್ನಲಾಗಿದೆ.
ಆಡುಗೋಡಿ ಎಸ್ಐಟಿ ತಾಂತ್ರಿಕ ವಿಭಾಗದ ಮುಂದೆ ಹಾಜರಾದ ರಮೇಶ್ ಜಾರಕಿಹೊಳಿಯನ್ನು ಕಬ್ಬನ್ ಪಾರ್ಕ್ ಪೊಲೀಸರು ಹಾಗೂ ಎಸ್ಐಟಿ ಅಧಿಕಾರಿಗಳು ಸತತ 4 ಗಂಟೆಗಳ ಕಾಲ ವಿಚಾರಣೆ ನಡೆಸಿದ್ದಾರೆ. ಈ ವೇಳೆ ಅಧಿಕಾರಿಗಳು ಕೇಳಿದ ಪ್ರಶ್ನೆಗಳಿಗೆ ತಡಬಡಾಯಿಸಿದ್ದು, ಯಾವುದೇ ಪ್ರಶ್ನೆಗಳಿಗೆ ಉತ್ತರಿಸಿಲ್ಲ. ವಿಡಿಯೋ, ಆಡಿಯೋಗಳಿಗೆ ಸಂಬಂಧಿಸಿದಂತೆ ಅಧಿಕಾರಿಗಳು ಪ್ರಶ್ನಿಸಿದ್ದು ಈ ವೇಳೆ ವಕೀಲರನ್ನು ಕೇಳಿ ಉತ್ತರಿಸುತ್ತೇನೆ ನಾಲ್ಕು ದಿನಗಳ ಕಾಲ ಸಮಯಾವಕಾಶ ನೀಡಿ ಎಂದು ಹೇಳಿದ್ದಾರೆ ಎನ್ನಲಾಗಿದೆ. ಅಲ್ಲದೇ ವಿಚಾರಣೆ ಬಳಿಕ ರಮೇಶ್ ಜಾರಕಿಹೊಳಿ ಎಸ್ಐಟಿ ಕಚೇರಿ ಹಿಂಭಾಗದಿಂದ ಮಾಧ್ಯಮಗಳ ಕಣ್ತಪ್ಪಿಸಿ ಎಸ್ಕೇಪ್ ಆಗಿದ್ದಾರೆ.
ಯುವತಿ ಪೋಷಕರ ದಿಢೀರ್ ಸುದ್ದಿಗೋಷ್ಠಿ: ನನ್ನ ಮಗಳು ಒತ್ತಡದಲ್ಲಿದ್ದಾಳೆ – ಆಕೆ ನೀಡುವ ಹೇಳಿಕೆ ಪರಿಗಣಿಸಬಾರದು ಎಂದ ತಂದೆ
ಇನ್ನು ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ರಮೇಶ್ ಜಾರಕಿಹೊಳಿ ಯುವತಿ ನ್ಯಾಯಾಲಯದಲ್ಲಿ ನೀಡುವ ಹೇಳಿಕೆಗಾಗಿ ಕಾದು ನೋಡಲು ಮುಂದಾಗಿದ್ದಾರೆ ಎನ್ನಲಾಗಿದೆ. ಯುವತಿ ಕೋರ್ಟ್ ಮುಂದೆ ಹಾಜರಾಗಿ ಹೇಳಿಕೆ ನೀಡಿದ ಬಳಿಕ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸುವ ಬಗ್ಗೆ ಚಿಂತನೆ ನಡೆಸಿದ್ದಾರೆ ಎನ್ನಲಾಗುತ್ತಿದೆ.