ಬ್ಯಾಂಕ್ ಗ್ರಾಹಕರಿಗೆ ಮುಖ್ಯವಾದ ಮಾಹಿತಿ ಇಲ್ಲಿದೆ. ಅಂದ ಹಾಗೆ, ಕೆಲವರು ಅನೇಕ ಬ್ಯಾಂಕುಗಳಲ್ಲಿ ಖಾತೆ ಹೊಂದಿರುತ್ತಾರೆ. ಅವುಗಳಲ್ಲಿ ಕೆಲ ಖಾತೆಗಳನ್ನು ಬಳಸಿಕೊಂಡು ಉಳಿದ ಖಾತೆಗಳಲ್ಲಿ ವ್ಯವಹಾರ ಮಾಡುವುದನ್ನೇ ಮರೆತಿರುತ್ತಾರೆ.
ಹೀಗೆ ನೀವು ವ್ಯವಹಾರ ಮಾಡದ ಖಾತೆ ಹೊಂದಿದ್ದರೆ ಅವುಗಳನ್ನು ಕ್ಲೋಸ್ ಮಾಡಿಸುವುದು ಒಳ್ಳೆಯದು. ಇಲ್ಲದಿದ್ದರೆ ನಿಮಗೆ ದಂಡ ಕಟ್ಟುವ ಅನಿವಾರ್ಯತೆ ಎದುರಾಗುತ್ತದೆ.
ಇತ್ತೀಚೆಗೆ ಬ್ಯಾಂಕುಗಳಲ್ಲಿ ವ್ಯವಹಾರದ ನಿಯಮಗಳು ಬದಲಾಗಿವೆ. ಕೆಲವು ಸೇವೆ ಉಚಿತವಾಗಿದ್ದು, ನಿಗದಿತ ವ್ಯವಹಾರಗಳ ನಂತರದ ಸೇವೆಗಳಿಗೆ ಶುಲ್ಕ ಪಾವತಿಸಬೇಕು. ಇಲ್ಲವೇ ದಂಡ ಕಟ್ಟಬೇಕು. ಎಸ್.ಎಂ.ಎಸ್. ಶುಲ್ಕ, ನಿರ್ವಹಣಾ ಶುಲ್ಕ, ಮಿನಿಮಮ್ ಬ್ಯಾಲೆನ್ಸ್ ಇಲ್ಲದಿದ್ದರೂ ಮತ್ತು ನಿಯಮಿತವಾಗಿ ವ್ಯವಹಾರ ಮಾಡದಿದ್ದರೂ ಶುಲ್ಕ, ದಂಡ ಕಟ್ಟುವಂತಾಗಿದೆ ಎನ್ನುವುದು ಗ್ರಾಹಕರ ಅಭಿಪ್ರಾಯವಾಗಿದೆ.
ನೀವು ನಿಮ್ಮ ಅಕೌಂಟ್ ಕ್ಲೋಸ್ ಮಾಡಿಲ್ಲವೆಂದರೆ ಅದಕ್ಕೆ ದಂಡ ಬೆಳೆಯುತ್ತಲೇ ಇರುತ್ತದೆ. ಕೆಲವೊಮ್ಮೆ ನೆಗೆಟಿವ್ ಬ್ಯಾಲೆನ್ಸ್ ಆಗಿ ನಿಮ್ಮ ಖಾತೆ ನಿರ್ವಹಣೆ ಮಾಡದ ಕಾರಣಕ್ಕೆ ನೀವು ದಂಡ ಪಾವತಿಸಬೇಕಾಗುತ್ತದೆ. ಬ್ಯಾಂಕ್ ವ್ಯವಹಾರಗಳಿಗೆ ಯಾವುದಾದರೂ ಕಾರಣಕ್ಕೆ ನೀವು ಎನ್.ಒ.ಸಿ. ಪಡೆಯುವಾಗ ನೀವು ಬಳಕೆ ಮಾಡದ ಖಾತೆ ಇರುವ ಬ್ಯಾಂಕ್ ನಿಂದ ಎನ್ಒಸಿ ಬೇಕಾದಲ್ಲಿ ನಿಮ್ಮ ಖಾತೆ ವ್ಯವಹಾರ ನಿರ್ವಹಣೆ ಮಾಡದ ಕಾರಣಕ್ಕೆ ಸಾವಿರಾರು ರೂಪಾಯಿ ದಂಡ ಕಟ್ಟಬೇಕಾಗುತ್ತದೆ. ನಿಮ್ಮ ಖಾತೆ ಬಳಕೆ ಮಾಡದ ಕಾರಣಕ್ಕೆ ನೀವು ಫೈನ್ ಕಟ್ಟಬೇಕಿರುವುದರಿಂದ ಈ ಬಗ್ಗೆ ಮೊದಲೇ ಎಚ್ಚೆತ್ತುಕೊಂಡು ಖಾತೆ ಕ್ಲೋಸ್ ಮಾಡಿಕೊಳ್ಳುವುದು ಒಳ್ಳೆಯದು ಎನ್ನಲಾಗಿದೆ.
ಬಹುತೇಕರು ಖಾತೆಯನ್ನು ತೆರೆದು ಆಧಾರ್ ಲಿಂಕ್ ಮಾಡಿರುತ್ತಾರೆ. ಆದರೆ ಅಂತಹ ಖಾತೆಗಳ ಮೂಲಕ ವ್ಯವಹಾರ ಮಾಡುವುದೇ ಇಲ್ಲ. ಇದರಿಂದ ನನಗೇನು ನಷ್ಟವಾಗಲಿಲ್ಲ ಎಂದು ಸುಮ್ಮನಾಗುವವರೆ ಜಾಸ್ತಿ. ಆದರೆ, ನಿಮ್ಮ ಖಾತೆಯನ್ನು ಕ್ಲೋಸ್ ಮಾಡದೆ ಹಾಗೆಯೇ ಬಿಟ್ಟರೆ ಫೈನ್ ಬೆಳೆಯುತ್ತಲೇ ಇರುತ್ತದೆ. ಅನಿವಾರ್ಯವಾದ ಸಂದರ್ಭದಲ್ಲಿ ನೀವು ಖಾತೆ ಕ್ಲೋಸ್ ಮಾಡಲು ಹೋದರೆ ಅನವಶ್ಯಕವಾಗಿ ಸಾವಿರಾರು ರೂಪಾಯಿ ದಂಡ ಪಾವತಿಸಬೇಕಾಗುತ್ತದೆ ಎಂದು ಹೇಳಲಾಗಿದ್ದು, ಜಾಲತಾಣಗಳಲ್ಲಿ ಈ ಬಗ್ಗೆ ಚರ್ಚೆಯಾಗ್ತಿದೆ.