ಕೊರೊನಾ ಲಾಕ್ಡೌನ್ ಕಾರಣಕ್ಕೆ ಈಗಾಗಲೇ ಸಂಕಷ್ಟದಲ್ಲಿರುವ ಉದ್ಯೋಗಿಗಳಿಗೆ ಮತ್ತೊಂದು ಶಾಕಿಂಗ್ ಸುದ್ದಿ ಇಲ್ಲಿದೆ. 2019 – 20 ನೇ ಸಾಲಿನ ಬಡ್ಡಿಯನ್ನು ಸುಮಾರು 40 ಲಕ್ಷಕ್ಕೂ ಅಧಿಕ ಪಿಎಫ್ ಸದಸ್ಯರ ಖಾತೆಗೆ ಜಮಾ ಮಾಡಿಲ್ಲ ಎನ್ನಲಾಗಿದ್ದು, ಯಾವ ಕಾರಣಕ್ಕೆ ಬಡ್ಡಿದೆ ಜಮಾ ಆಗಿಲ್ಲವೆಂಬ ಗೊಂದಲದಲ್ಲಿ ಪಿಎಫ್ ಖಾತೆದಾರರಿದ್ದಾರೆ.
ಈ ಬಾರಿ ಸುಮಾರು ಮೂರು ತಿಂಗಳು ತಡವಾಗಿ ಬಡ್ಡಿ ಪಾವತಿಸುವ ಪ್ರಕ್ರಿಯೆ ನಡೆದಿದ್ದು, ಡಿಸೆಂಬರ್ ತಿಂಗಳಿನಿಂದ ಪಿಎಫ್ ಸದಸ್ಯರ ಖಾತೆಗಳಿಗೆ ಶೇಕಡಾ 8.5 ರಷ್ಟು ಬಡ್ಡಿ ಜಮೆ ಮಾಡಲಾಗುತ್ತಿದೆ. ಆದರೆ ಅನೇಕರ ಖಾತೆಗಳಿಗೆ ಬಡ್ಡಿ ಜಮಾ ಆಗಿಲ್ಲ ಎಂದು ಹೇಳಲಾಗಿದೆ.
ವಿದ್ಯಾರ್ಥಿಗಳಿಗೆ ಮುಖ್ಯ ಮಾಹಿತಿ: ಪರೀಕ್ಷೆ ಇಲ್ಲದೆ 1 -9 ತರಗತಿ ಎಲ್ಲಾ ಮಕ್ಕಳು ಪಾಸ್…?
ಮೂಲಗಳ ಪ್ರಕಾರ ಪಿಎಫ್ ಸದಸ್ಯರ ಖಾತೆಗಳಿಗೆ ಬಡ್ಡಿ ಜಮಾ ಆಗದಿರಲು ಅವರುಗಳು ಕೆವೈಸಿ ಪ್ರಕ್ರಿಯೆ ಪೂರ್ಣಗೊಳಿಸದಿರುವುದೇ ಕಾರಣವೆನ್ನಲಾಗಿದ್ದು, ಹೀಗಾಗಿ ತಮ್ಮ ಖಾತೆಗೆ ಬಡ್ಡಿ ಜಮಾ ಆಗದೆ ಇರುವವರು epfo ವೆಬ್ ಸೈಟ್ ಗೆ ಲಾಗಿನ್ ಆಗಿ ತಮ್ಮ ಕೆವೈಸಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕಿದೆ.