ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ನಾಳೆ ಬೆಳಗಾವಿಗೆ ತೆರಳಲಿದ್ದಾರೆ. ನನಗೆ ಯಾವ ಭಯವೂ ಇಲ್ಲ, ಯಾರ ಭದ್ರತೆಯೂ ಬೇಡ ಎಂದು ಅವರು ಹೇಳಿದ್ದಾರೆ.
ಯಾರು ಯಾರನ್ನೋ ಕರೆದುಕೊಂಡು ಬಂದು ಹೇಳಿಕೆ ಕೊಡಿಸುತ್ತಿದ್ದಾರೆ. ಕೇಸು ಮುಚ್ಚಿಹಾಕಲು ಏನೇನೋ ಮಾಡುತ್ತಿದ್ದಾರೆ ಮಾಡಲಿ ಬಿಡಿ. ಆದರೆ ಪೊಲೀಸರು ಸರಿಯಾಗಿ ತನಿಖೆ ಮಾಡಲಿ ಎಂದು ಡಿಕೆಶಿ ಹೇಳಿದ್ದಾರೆ.
ಸಂಜೆ ನಮ್ಮ ನಾಯಕರ ಸಭೆ ಕರೆದಿದ್ದೇವೆ. ಸಿಎಲ್ಪಿ ಲೀಡರ್, ನಾನು, ರಾಮಲಿಂಗಾರೆಡ್ಡಿ, ಎಸ್.ಆರ್. ಪಾಟೀಲ್ ಬೆಳಗಾವಿಗೆ ತೆರಳಲಿದ್ದು, ನಾಮಪತ್ರ ಸಲ್ಲಿಕೆ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದೇವೆ. ಅಲ್ಲಿಂದ ಮಸ್ಕಿಗೆ ತೆರಳಿ ನಾಡಿದ್ದು ಬಸವಕಲ್ಯಾಣಕ್ಕೆ ತೆರಳಲಿದ್ದೇವೆ ಎಂದು ತಿಳಿಸಿದ್ದಾರೆ.
ಸಿಡಿ ಪ್ರಕರಣದಲ್ಲಿ ಯುವತಿ ಪೋಷಕರು ಬಿಜಾಪುರದಲ್ಲಿದ್ದವರು ಬೆಳಗಾವಿಗೆ ಬಂದಿದ್ದು ಹೇಗೆ? ಯಾರ ವಿರುದ್ಧವೂ ನಾನು ಕೇಸ್ ಹಾಕಲ್ಲ. ನನ್ನ ವಿರುದ್ಧವೂ ಪ್ರತಿಭಟನೆ ನಡೆಯಲಿ. ನನಗೇನೂ ಭದ್ರತೆ ಬೇಡ ಪೊಲೀಸ್ ಆಯುಕ್ತರಿಗೆ ಪತ್ರ ಬರೆಯುತ್ತೇನೆ ಎಂದು ಹೇಳಿದ್ದಾರೆ.