ನವದೆಹಲಿ: ಕೊರೋನಾ ಎರಡನೆಯ ಅಲೆ ಆತಂಕವನ್ನುಂಟು ಮಾಡಿದ ಹಿನ್ನೆಲೆಯಲ್ಲಿ ಕೇಂದ್ರದಿಂದ ಮಾರ್ಗಸೂಚಿ ಬಿಡುಗಡೆ ಮಾಡಲಾಗಿದೆ.
ಒಬ್ಬ ಸೋಂಕಿತ ಪತ್ತೆಯಾದರೆ 30 ಸಂಪರ್ಕಿತರನ್ನು ಪತ್ತೆ ಹಚ್ಚಬೇಕು. ಸೋಂಕು ಹೆಚ್ಚಾದ ಪ್ರದೇಶದಲ್ಲಿ ಅಧಿಕವಾಗಿ ಲಸಿಕೆ ವಿತರಿಸಬೇಕು. ಕರ್ನಾಟಕ ಸೇರಿದಂತೆ ಕೆಲವು ರಾಜ್ಯಗಳಲ್ಲಿ ಹೊಸ ಪ್ರಕರಣ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಹೊಸ ಮಾರ್ಗಸೂಚಿ ಬಿಡುಗಡೆ ಮಾಡಿದ್ದು, ಪರೀಕ್ಷೆಯನ್ನು ಹೆಚ್ಚಳ ಮಾಡಬೇಕು. ಒಟ್ಟು ಪರೀಕ್ಷೆಯಲ್ಲಿ ಆರ್.ಟಿ.ಪಿ.ಸಿ.ಆರ್. ಶೇಕಡ 70 ರಷ್ಟು ಇರಬೇಕು.
ಸೋಂಕಿತರ ಸಂಪರ್ಕಕ್ಕೆ ಬಂದ ಕನಿಷ್ಠ 30 ಜನರನ್ನು ಪತ್ತೆ ಮಾಡಬೇಕು. ಅವರನ್ನು 72 ಗಂಟೆ ಪ್ರತ್ಯೇಕವಾಗಿರಿಸಬೇಕು. ಕೋವಿಡ್ ಮಾರ್ಗಸೂಚಿ ಉಲ್ಲಂಘಿಸಿದವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು. ಲಸಿಕೆ ವಿತರಣೆ ಚುರುಕುಗೊಳಿಸಬೇಕು. ಕೋವಿಡ್ ಸರಪಳಿ ಕತ್ತರಿಸಬೇಕು. ಸೋಂಕು ಹೆಚ್ಚುತ್ತಿರುವ ಜಿಲ್ಲೆಗಳಲ್ಲಿ ಬಿಗಿ ಕ್ರಮದೊಂದಿಗೆ ಮುಂಜಾಗ್ರತೆ ಕ್ರಮ ವಹಿಸಬೇಕು ಎಂದು ಹೇಳಲಾಗಿದೆ.