ಮಾಜಿ ಸಚಿವ ರಮೇಶ ಜಾರಕಿಹೊಳಿ ಅವರು ಡಿ.ಕೆ. ಶಿವಕುಮಾರ್ ವಿರುದ್ಧ ಆಕ್ರೋಶದಿಂದ ಸ್ಪೋಟಕ ಹೇಳಿಕೆ ನೀಡಿದ್ದಾರೆ. ನಾನು ಗಂಡಸು, ಅವನು ಗಾ… ಎಂದು ರಮೇಶ್ ಜಾರಕಿಹೊಳಿ ಆರೋಪಿಸಿದ್ದಾರೆ.
ಮಹಾ ನಾಯಕರು ಎಂತಹ ತಪ್ಪು ಮಾಡಿದ್ದಾರೆ ಎನ್ನುವುದನ್ನು ಯುವತಿ ಪೋಷಕರೇ ಹೇಳಿದ್ದಾರೆ. ಆತ ರಾಜಕಾರಣಕ್ಕೆ ನಾಲಾಯಕ್ ಎಂದು ರಮೇಶ್ ಜಾರಕಿಹೊಳಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಡಿ.ಕೆ. ಶಿವಕುಮಾರ್ ವಿರುದ್ಧ ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸಿದ ರಮೇಶ್ ಜಾರಕಿಹೊಳಿ, ಮಹಾನಾಯಕನನ್ನು ಒದ್ದು ಒಳಗೆ ಹಾಕಿ. ನಮ್ಮ ಕುಟುಂಬದಲ್ಲಿ ಯಾವ ಹುಡುಗಿಗೆ ಮೋಸ ಮಾಡಿಲ್ಲ. ನನ್ನ ಬಳಿ 11 ಸಾಕ್ಷ್ಯಾಧಾರಗಳಿವೆ ಎಂದು ಆಕ್ರೋಶದಿಂದ ಡಿ.ಕೆ. ಶಿವಕುಮಾರ್ ವಿರುದ್ಧ ಕಿಡಿಕಾರಿದ್ದಾರೆ.
ನಾನು ತಪ್ಪು ಮಾಡಿದ್ದರೆ ನನ್ನನ್ನು ಒದ್ದು ಒಳಗೆ ಹಾಕಿ. ಆತ ತಪ್ಪು ಮಾಡಿದ್ದಾರೆ. ಅವರನ್ನು ಒದ್ದು ಒಳಗೆ ಹಾಕಬೇಕು ಎಂದು ಏಕವಚನದಲ್ಲೇ ವಾಗ್ದಾಳಿ ನಡೆಸಿದ್ದಾರೆ.