alex Certify ಮಲೆನಾಡ ಸೌಂದರ್ಯದ ರೂಪಕ ಉಂಚಳ್ಳಿ ಜಲಪಾತದ ವೈಭವವನ್ನ ಕಂಡಿದ್ದೀರಾ….? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಲೆನಾಡ ಸೌಂದರ್ಯದ ರೂಪಕ ಉಂಚಳ್ಳಿ ಜಲಪಾತದ ವೈಭವವನ್ನ ಕಂಡಿದ್ದೀರಾ….?

ಬಿಸಿಲ ಧಗೆ ತಡೆಯೋಕೆ ಆಗ್ತಿಲ್ಲ. ಇಂಥಾ ಟೈಂನಲ್ಲಿ ಪ್ರವಾಸಕ್ಕೆ ಹೋಗಬೇಕು ಅಂದ್ರೆ ನೀರಿರುವ ಸ್ಥಳವೇ ಬೆಸ್ಟ್​. ಇದಕ್ಕಾಗಿ ನೀವು ಉಂಚಳ್ಳಿ ಜಲಪಾತವನ್ನ ಆಯ್ಕೆ ಮಾಡಿಕೊಳ್ಳಬಹುದು. ಅಘನಾಶಿನಿ ನದಿಯಿಂದ ಉಗಮವಾದ ಈ ಜಲಾಪಕ್ಕೆ ಲುಷಿಂಗ್ಟನ್​ ಎಂದೂ ಹೆಸರಿದೆ.

ಉತ್ತರ ಕನ್ನಡ ಜಿಲ್ಲೆ ಶಿರಸಿಯಿಂದ ಕೇವಲ 30 ಮೀಟರ್​ ದೂರದಲ್ಲಿ ಈ ಜಲಪಾತವಿದೆ. ಸಿದ್ದಾಪುರದಿಂದ ವಾಯುವ್ಯಕ್ಕೆ 19 ಕಿಲೋಮೀಟರ್​ ದೂರದಲ್ಲಿದೆ. 1845ರಲ್ಲಿ ಬ್ರಿಟಿಷ್​ ಅಧಿಕಾರಿ ಜೆ.ಟಿ. ಲುಷಿಂಗ್ಟನ್​ ಈ ಜಲಪಾತವನ್ನ ಪತ್ತೆ ಮಾಡಿದ್ರು ಅನ್ನೋ ಕಾರಣಕ್ಕೆ ಇದಕ್ಕೆ ಲುಷಿಂಗ್ಟನ್​ ಎಂಬ ಹೆಸರು ಬಂದಿದೆ. ಅಲ್ಲದೇ ಈ ಜಲಪಾತವು ಬೀಳುವಾಗ ಆಗು ಶಬ್ದದಿಂದಾಗಿ ಕೆಪ್ಪ ಜೋಗ ಅಂತಲೂ ಕರೆಯುತ್ತಾರೆ.

ಮಲೆನಾಡ ಮಡಿಲಿನಲ್ಲಿ ಸಂಪೂರ್ಣ ಹಸಿರಿನ ಮಧ್ಯದಲ್ಲೇ ಇರುವ ಈ ಜಲಪಾತವನ್ನ ಕಣ್ತುಂಬಿಕೊಳ್ಳೋದೇ ಪರಮಾನಂದ. ಇದೇ ಜಲಪಾತದಿಂದ ಕೇವಲ 1 ಕಿಲೋಮೀಟರ್​ ದೂರದಲ್ಲಿ ಬುರುಡೆ ಜೋಗ ಇದೆ. ಇಲ್ಲೆಲ್ಲ ಹೋಗೋಕೆ ರಸ್ತೆ ಮಾರ್ಗ ಕೂಡ ಸರಿಯಾಗಿ ಇರೋದ್ರಿಂದ ನೀವು ಆರಾಮಾಗಿ ಪ್ರವಾಸ ಮಾಡಬಹುದು. ಮಳೆಗಾಲದಲ್ಲಿ ಇವುಗಳ ಸೌಂದರ್ಯ ನೋಡೋದು ಕಣ್ಣಿಗೆ ಹಬ್ಬವೇ ಸರಿ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...