ಒಬ್ಬ ಹೆಣ್ಣು ಮಗಳನ್ನು ಇಟ್ಟುಕೊಂಡು ರಾಜಕಾರಣ ಮಾಡುತ್ತಿದ್ದಾರೆ. ಡಿ.ಕೆ. ಶಿವಕುಮಾರ್ ನಮ್ಮ ಅಕ್ಕನನ್ನು ಒತ್ತೆಯಾಳಾಗಿ ಮಾಡಿದ್ದಾರೆ ಎಂದು ಸಿಡಿಯಲ್ಲಿದ್ದ ಯುವತಿಯ ಸಹೋದರ ಆರೋಪಿಸಿದ್ದಾರೆ.
ಎಸ್ಐಟಿ ವಿಚಾರಣೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಯುವತಿ ಕುಟುಂಬದವರು, ನನ್ನ ಅಕ್ಕನ ಜೊತೆ ಮೊಬೈಲ್ ನಲ್ಲಿ ಚರ್ಚೆ ಮಾಡಿದ ಆಡಿಯೋ ವೈರಲ್ ಆಗಿದೆ. ನಮ್ಮ ಕುಟುಂಬಕ್ಕೆ ಏನೇ ತೊಂದರೆಯಾದರೂ ಡಿ.ಕೆ. ಶಿವಕುಮಾರ್ ಅವರೇ ಹೊಣೆ ಎಂದು ಪೋಷಕರು ಹೇಳಿದ್ದಾರೆ.
ನಮ್ಮ ಅಕ್ಕನನ್ನು ನಮಗೆ ತಂದು ಒಪ್ಪಿಸಿ ಎಂದು ಮನವಿ ಮಾಡಿದ್ದು, ನಮ್ಮ ಬಳಿ ಸಾಕಷ್ಟು ಸಾಕ್ಷ್ಯಗಳಿವೆ. ಅವುಗಳನ್ನು ಎಸ್ಐಟಿಗೆ ಕೊಟ್ಟಿದ್ದೇವೆ ಎಂದು ತಿಳಿಸಿದ್ದಾರೆ. ಮಾರ್ಚ್ 2 ರಂದು ಸಿಡಿ ಪ್ರಕರಣದ ಬೆಳಕಿಗೆ ಬಂದಾಗ ದೊಡ್ಡಮಟ್ಟದ ಚರ್ಚೆಯಾಗಿತ್ತು ಎಂದು ನೇರವಾಗಿ ಡಿ.ಕೆ. ಶಿವಕುಮಾರ್ ಅವರ ವಿರುದ್ಧ ಯುವತಿಯ ಪೋಷಕರು ಆರೋಪ ಮಾಡಿದ್ದಾರೆ.
ನಮ್ಮ ಅಕ್ಕನನ್ನು ಇಟ್ಟುಕೊಂಡು ರಾಜಕಾರಣ ಮಾಡುತ್ತಿದ್ದಾರೆ. ನೀವು ಗಂಡಸರೇ ಆಗಿದ್ದರೆ ಎದುರುಬದರು ಹೋರಾಡಿ. ನಮ್ಮಂಥವರನ್ನು ಯಾಕೆ ರಾಜಕೀಯಕ್ಕೆ ಬಳಸಿಕೊಳ್ಳುತ್ತೀರಿ. ನಮಗೆ ಪೊಲೀಸರು ಭದ್ರತೆ ನೀಡಿದ್ದಾರೆ. ನರೇಶ್ ಗೌಡ ಹೇಳಿದ ಹೇಳಿಕೆ ಸಂಪೂರ್ಣ ಸುಳ್ಳು. ಹೊಲಸು ರಾಜಕಾರಣಕ್ಕೆ ಹೆಣ್ಣುಮಗಳನ್ನು ಯಾಕೆ ಬಳಸುತ್ತಿದ್ದೀರಿ. ನಮ್ಮ ಮೇಲೆ ಯಾವುದೇ ರಾಜಕೀಯ ಪ್ರಭಾವ ಇಲ್ಲ. ನಾವು ಈಗಲೂ ನಮ್ಮ ಸಂಬಂಧಿಕರ ಮನೆಯಲ್ಲಿ ಇದ್ದೇವೆ ಎಂದು ಯುವತಿಯ ಪೋಷಕರು ತಿಳಿಸಿದ್ದಾರೆ. ನಮ್ಮ ಕುಟುಂಬಕ್ಕೆ ಏನೇ ತೊಂದರೆ ಆದರೂ ಡಿಕೆಶಿ ಹೊಣೆ ಎಂದು ಹೇಳಿದ್ದಾರೆ.