alex Certify ಈ ವರ್ಷದ ಸೆಪ್ಟೆಂಬರ್​ನಲ್ಲಿ ದೇಶದಲ್ಲಿ ಮತ್ತೊಂದು ಕೊರೊನಾ ಲಸಿಕೆ..? ಶುರುವಾಯ್ತು ಪ್ರಾಯೋಗಿಕ ಪರೀಕ್ಷೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ವರ್ಷದ ಸೆಪ್ಟೆಂಬರ್​ನಲ್ಲಿ ದೇಶದಲ್ಲಿ ಮತ್ತೊಂದು ಕೊರೊನಾ ಲಸಿಕೆ..? ಶುರುವಾಯ್ತು ಪ್ರಾಯೋಗಿಕ ಪರೀಕ್ಷೆ

ಸೀರಂ ಇನ್​ಸ್ಟಿಟ್ಯೂಟ್​ ಆಫ್​ ಇಂಡಿಯಾದ ಸಿಇಒ ಭಾರತದಲ್ಲಿ ಮತ್ತೊಂದು ಕೋವಿಡ್​ ಲಸಿಕೆ ಕೊವೊವ್ಯಾಕ್ಸ್​ನ ಪ್ರಾಯೋಗಿಕ ಪರೀಕ್ಷೆ ಆರಂಭಿಸಿರೋದಾಗಿ ಹೇಳಿದ್ದಾರೆ. ಅಲ್ಲದೇ ಲಸಿಕೆಯನ್ನ ಸೆಪ್ಟೆಂಬರ್​ ತಿಂಗಳಲ್ಲಿ ಲಾಂಚ್​ ಮಾಡುವ ಬಗ್ಗೆ ಕಂಪನಿ ಚಿಂತಿಸಿದೆ.

ಕಳೆದ ವರ್ಷ ಆಗಸ್ಟ್​ನಲ್ಲಿ ಅಮೆರಿಕದ ಲಸಿಕೆ ತಯಾರಕ ಕಂಪನಿ ನೊವಾವ್ಯಾಕ್ಸ್​ ಸೀರಂ ಇನ್​ಸ್ಟಿಟ್ಯೂಟ್​ ಜೊತೆ ಒಪ್ಪಂದ ಮಾಡಿಕೊಂಡು ಈ ಲಸಿಕೆಯನ್ನ ತಯಾರಿಸಿದೆ.

ಕೊವೊವ್ಯಾಕ್ಸ್​ನ ಪ್ರಯೋಗ ಕೊನೆಗೂ ಭಾರತದಲ್ಲಿ ಆರಂಭವಾಗಿದೆ. ಈ ಲಸಿಕೆಯನ್ನ ಸೀರಂ ನೊವಾವ್ಯಾಕ್ಸ್​ ಸಹಭಾಗಿತ್ವದಲ್ಲಿ ತಯಾರಿಸಿದೆ.

ಈ ಲಸಿಕೆಯು ಆಫ್ರಿಕಾ ಹಾಗೂ ಬ್ರಿಟನ್​ನ ರೂಪಾಂತರಿ ವೈರಸ್​ ವಿರುದ್ಧ ಪರೀಕ್ಷಿಸಲಾಗಿದ್ದು 89 ಪ್ರತಿಶತ ಪರಿಣಾಮಕಾರತ್ವವನ್ನ ತೋರಿಸಿದೆ. ಈ ಲಸಿಕೆಯು ಸೆಪ್ಟೆಂಬರ್​ನಲ್ಲಿ ಲಾಂಚ್​ ಆಗುತ್ತದೆ ಎಂಬ ನಂಬಿಕೆ ಇದೆ ಎಂದು ಪೂನಾವಾಲಾ ಟ್ವೀಟಾಯಿಸಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...