ವಿಮಾನ ಪ್ರಯಾಣಕ್ಕಿಂತ ಮೊದಲು ನಿಮಗೆ ಕೊರೊನಾ ಪಾಸಿಟಿವ್ ಆಗಿದೆ ಎಂಬುದು ಗೊತ್ತಾದ್ರೆ ವಿಮಾನ ಪ್ರಯಾಣ ಸಾಧ್ಯವಿಲ್ಲ. ಜೊತೆಗೆ ಟಿಕೆಟ್ ಹಣ ವಿಮಾನ ಸಂಸ್ಥೆಗೆ ಸೇರುತ್ತೆ. ಆದ್ರೆ ಇನ್ಮುಂದೆ ಸ್ಪೈಸ್ ಜೆಟ್ ನಲ್ಲಿ ನಿಮ್ಮ ಟಿಕೆಟ್ ಹಣ ವಿಮಾನ ಸಂಸ್ಥೆಗೆ ಸೇರುವುದಿಲ್ಲ. ಟಿಕೆಟ್ ಶುಲ್ಕ ನಿಮಗೆ ವಾಪಸ್ ಬರಲಿದೆ.
ಸ್ಪೈಸ್ ಜೆಟ್ ತನ್ನ ಪ್ರಯಾಣಿಕರಿಗಾಗಿ ವಿಶೇಷ ಸೌಲಭ್ಯವನ್ನು ಘೋಷಿಸಿದೆ. ಯಾವುದೇ ಪ್ರಯಾಣಿಕರು ವಿಮಾನ ಏರುವ ಮೊದಲು ಕೊರೊನಾ ಪಾಸಿಟಿವ್ ಎಂಬುದು ಗೊತ್ತಾದಲ್ಲಿ ಪ್ರಯಾಣಿಕರಿಗೆ ಟಿಕೆಟ್‌ನ ಹಣವನ್ನು ಮರುಪಾವತಿ ಮಾಡಲಾಗುತ್ತದೆ. ಆದ್ರೆ ಇದಕ್ಕಾಗಿ ಪ್ರಯಾಣಿಕರು ಸ್ಪೈಸ್ ಹೆಲ್ತ್ ಡಾಟ್ ಕಾಂನೊಂದಿಗೆ ಆರ್ಟಿ-ಪಿಸಿಆರ್ ಪರೀಕ್ಷೆಯನ್ನು ಕಾಯ್ದಿರಿಸಬೇಕಾಗುತ್ತದೆ.
ಕೊರೊನಾ ಪರೀಕ್ಷೆಯ ಈ ಸೌಲಭ್ಯವನ್ನು ಪ್ರಸ್ತುತ ದೆಹಲಿ, ಗುರುಗ್ರಾಮ್ ಮತ್ತು ಮುಂಬೈಗಳಲ್ಲಿ ಮಾತ್ರ ಒದಗಿಸಲಾಗುತ್ತಿದೆ. ಅಲ್ಲಿನ ಪ್ರಯಾಣಿಕರಿಗೆ ಕೊರೊನಾ ಟೆಸ್ಟ್ ಮನೆಯಲ್ಲೂ ನಡೆಯಲಿದೆ. ಪರೀಕ್ಷೆ ಮಾಡಬಯಸುವ ಪ್ರಯಾಣಿಕರು ಸ್ಪೈಸ್ ಹೆಲ್ತ್ ಡಾಟ್ ಕಾಮ್ ನಲ್ಲಿ ಬುಕ್ಕಿಂಗ್ ಮಾಡಬಹುದು.
ಸ್ಪೈಸ್ ಹೆಲ್ತ್ ಕೇವಲ 299 ರೂಪಾಯಿಗಳಿಗೆ ಆರ್ಟಿ-ಪಿಸಿಆರ್ ಪರೀಕ್ಷೆಯನ್ನು ಒದಗಿಸುತ್ತಿದೆ. ಮಾರುಕಟ್ಟೆಯಲ್ಲಿ ಈ ಪರೀಕ್ಷೆಯ ದರ 850 ರೂಪಾಯಿ. ಸ್ಪೈಸ್ ಜೆಟ್‌ನ ಪ್ರಯಾಣಿಕರು ಮಾತ್ರವಲ್ಲ ಬೇರೆಯವರು ಕೂಡ ಈ ಸೌಲಭ್ಯ ಪಡೆಯಬಹುದು. ಆದರೆ ಅವರು ಈ ಪರೀಕ್ಷೆಗೆ 299 ರೂಪಾಯಿಗಳ ಬದಲು 499 ರೂಪಾಯಿಗಳನ್ನು ಪಾವತಿಸಬೇಕಾಗುತ್ತದೆ.