alex Certify ಬಾಳೆಹಣ್ಣಿನ ಸಿಪ್ಪೆ ಮೇಲೆ ಕಾಲಿಟ್ರೆ ಜಾರುವುದು ಏಕೆ…? ಈ ವಿಡಿಯೋದಲ್ಲಿದೆ ಉತ್ತರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಾಳೆಹಣ್ಣಿನ ಸಿಪ್ಪೆ ಮೇಲೆ ಕಾಲಿಟ್ರೆ ಜಾರುವುದು ಏಕೆ…? ಈ ವಿಡಿಯೋದಲ್ಲಿದೆ ಉತ್ತರ

ಬಾಳೆಹಣ್ಣಿನ ಸಿಪ್ಪೆಯ ಮೇಲೆ ಕಾಲಿಟ್ರೆ ಜಾರಿ ಬೀಳೋದು ಪಕ್ಕಾ ಅನ್ನೋ ವಿಚಾರ ಎಲ್ಲರಿಗೂ ತಿಳಿದಿರೋದೇ. ಆದರೆ ಕಾರುಗಳಿಗೂ ಈ ಮಾತು ಅನ್ವಯವಾಗುತ್ತಾ..? ಅಂತಾ ಕೇಳಿದ್ರೆ ನಿಮ್ಮ ಬಳಿ ಉತ್ತರ ಇಲ್ಲದೇ ಇರಬಹುದು. ಹೀಗಾಗಿಯೇ ಯುಟ್ಯೂಬರ್​​ ಒಬ್ಬರು ಈ ವಿಚಾರವಾಗಿ ಒಂದು ಸಣ್ಣ ಅನ್ವೇಷಣೆ ಮಾಡಿದ್ದಾರೆ.

ದಿ ಆಕ್ಷನ್​ ಲ್ಯಾಬ್​ ಯುಟ್ಯೂಬ್​ ಚಾನೆಲ್​​ನಲ್ಲಿ ಅಪ್​ಲೋಡ್​ ಮಾಡಲಾದ ವಿಡಿಯೋದಲ್ಲಿ ನಿಮ್ಮ ಈ ಪ್ರಶ್ನೆಗೆ ಉತ್ತರ ಸಿಗಲಿದೆ. ಕೆಮಿಕಲ್​ ಇಂಜಿನಿಯರಿಂಗ್​​ನಲ್ಲಿ ಪಿ.ಹೆಚ್.​ಡಿ. ಮಾಡಿ ಆರ್​​ & ಡಿ ಇಂಜಿನಿಯರ್ ಆಗಿ ಕೆಲಸ ಮಾಡ್ತಿರುವ ಯುಟ್ಯೂಬರ್​​ ಜೇಮ್ಸ್​ ಈ ಪ್ರಶ್ನೆಗೆ ಉತ್ತರ ನೀಡಿದ್ದಾರೆ.

8 ನಿಮಿಷದ ವಿಡಿಯೋದಲ್ಲಿ ಬಾಳೆಹಣ್ಣುಗಳ ಸಿಪ್ಪೆ ಯಾಕೆ ಜಾರುತ್ತೆ ಅನ್ನೋದಕ್ಕೆ ವಿವರಣೆ ನೀಡಿದ್ದಾರೆ. ಬಾಳೆಹಣ್ಣಿನ ಸಿಪ್ಪೆಯಲ್ಲಿರುವ ಪ್ರೋಟಿನ್​ ಹಾಗೂ ಪಾಲಿಸೆಕರೈಡ್​ಗಳು ದ್ರವ ಮಾದರಿಯಲ್ಲಿದ್ದು ಇದರಿಂದಲೇ ಬಾಳೆಹಣ್ಣಿನ ಸಿಪ್ಪೆಯನ್ನ ಮೆಟ್ಟಿದ್ದರೆ ನಾವು ಜಾರುತ್ತೇವೆ ಎಂದು ಹೇಳಿದ್ದಾರೆ.

ಟ್ರ್ಯಾಕ್​ನಲ್ಲಿ ಬಾಳೆಹಣ್ಣುಗಳ ಸಿಪ್ಪೆಯನ್ನ ಎಸೆದು ಕಾರನ್ನ ಚಲಾಯಿಸಿದ್ದಾರೆ. ಒಂದೆರಡು ಸಿಪ್ಪೆಯ ಮೇಲೆ ಕಾರಿನ ಚಕ್ರ ಜಾರಿಲ್ಲ. ಆದರೆ ರಾಶಿ ರಾಶಿ ಸಿಪ್ಪೆಗಳ ಮೇಲೆ ಹೋಗುವಾಗ ಕಾರಿನ ಚಕ್ರ ನಿಯಂತ್ರಣ ತಪ್ಪೋದನ್ನ ನೀವು ಕಾಣಬಹುದಾಗಿದೆ.

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...