ಚೀನಾದ ಜೇಜಿಯಾಂಗ್ ಪ್ರಾಂತ್ಯದಲ್ಲಿರುವ ಸೇತುವೆಯೊಂದು ತನ್ನ ವಿಚಿತ್ರ ವಿನ್ಯಾಸದ ಮೂಲಕ ನೆಟ್ಟಿಗರ ಹುಬ್ಬೇರುವಂತೆ ಮಾಡಿದೆ. ಇದರ ವಿನ್ಯಾಸ ಎಷ್ಟು ವಿಚಿತ್ರವಾಗಿ ಇದೆ ಅಂದರೆ ಅನೇಕ ಮಂದಿ ಇಂತಹದ್ದೊಂದು ಸೇತುವೆ ಇರೋಕೆ ಸಾಧ್ಯಾನೇ ಇಲ್ಲ ಎಂದು ಹೇಳ್ತಿದ್ದಾರೆ.
ಈ ರುಯಿ ಗಾಜಿನ ಸೇತುವೆ ನೆಲದಿಂದ 140 ಮೀಟರ್ ಎತ್ತರದಲ್ಲಿದೆ ಹಾಗೂ ಇದು ಬಾಗಿದ ಸೇತುವೆ ಎಂದೇ ಹೆಸರು ಪಡೆದಿದೆ.
ಈ ಸೇತುವೆಯನ್ನ 2017ರಲ್ಲಿ ಅನಾವರಣ ಮಾಡಲಾಗಿದ್ದು 2020ರಿಂದ ಸ್ಥಳೀಯರ ಬಳಕೆಗೆ ಅನುವು ಮಾಡಲಾಗಿದೆ. ಇದೊಂದು ಅತ್ಯುತ್ತಮ ಪ್ರವಾಸಿ ತಾಣವಾಗಿ ಬದಲಾಗೋದ್ರಲ್ಲಿ ಸಂಪೂರ್ಣ ಯಶಸ್ವಿಯಾಗಿದೆ. ಶೆನ್ಸಿಯಾಂಜು ಸಿನಿಕ್ ಏರಿಯಾದ ವೀಬೊ ಖಾತೆಯು ನೀಡಿರುವ ಮಾಹಿತಿ ಪ್ರಕಾರ ಇದು 100 ಮೀಟರ್ ಉದ್ದವಿದ್ದು ಭೂಮಿಯಿಂದ 140 ಮೀಟರ್ ಎತ್ತರದಲ್ಲಿದೆ. ಇದು ಶನ್ಕ್ಸಿಯಾಂಜುವಿನ ಪೂರ್ವ ಹಾಗೂ ಪಶ್ಚಿಮದಗಲಕ್ಕೆ ವ್ಯಾಪಿಸಿದೆ.
ಈ ಸೇತುವೆಯ ಫೋಟೋಗಳ ಕೆಲ ಸಮಯದಿಂದ ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗ್ತಿದೆ. ಈ ಸೇತುವೆ ನೋಡಿದ ಅನೇಕರು ಇಂತಹ ಸೇತುವೆ ಇರೋಕೆ ಸಾಧ್ಯವೇ ಇಲ್ಲ ಎಂದು ಹೇಳ್ತಿದ್ದಾರೆ.