ಬೆಂಗಳೂರು: ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಮಾಜಿ ಸಚಿವ ರಮೇಶ್ ಜಾರಕಿಹೊಳಿಯವರನ್ನು ಬಂಧಿಸಬೇಕು ಎಂದು ಯುವತಿ ಪರ ವಕೀಲ ಜಗದೀಶ್ ಒತ್ತಾಯಿಸಿದ್ದಾರೆ.
ನಾವು ಯಾರ ವಿರುದ್ಧ ದೂರು ದಾಖಲಿಸಿದ್ದೇವೋ ಅವರಿಂದ ನಮಗೆ ಬೆದರಿಕೆ ಕರೆಗಳು ಬರುತ್ತಿವೆ. ಆರೋಪಿ ವಿರುದ್ಧ ಸೆಕ್ಷನ್ 376C ಅಡಿ ಕೇಸ್ ದಾಖಲಾಗಿದೆ. ಆದರೂ ಕಬ್ಬನ್ ಪಾರ್ಕ್ ಪೊಲಿಸರು ಆರೋಪಿಯನ್ನು ಬಂಧಿಸದೇ ಬಿಟ್ಟಿರುವುದು ಯಾಕೆ? ಎಂದು ಪ್ರಶ್ನಿಸಿದ್ದಾರೆ.
ಎಲ್ಲಾ ರಿವರ್ಸ್ ಆಗ್ತಿದೆ, ಡಿಕೆಶಿ ಭೇಟಿಯಾಗಿಲ್ಲ: ಸಿಡಿ ಯುವತಿಯಿಂದ ಮತ್ತೊಂದು ಸಂಗತಿ ಬಹಿರಂಗ
ಆರೋಪಿಯನ್ನು ಬಂಧಿಸದೇ ಗೂಳಿಯಂತೆ ಓಡಾಡಲು ಬಿಟ್ಟಿದ್ದಾರೆ. ಅವರು ರಾಜ್ಯ ಸರ್ಕಾರಕ್ಕೆ ಬೆದರಿಕೆಯೊಡ್ಡುತ್ತಾ, ಯುವತಿಗೂ ಬೆದರಿಸುತ್ತಾ ಓಡಾಡುತ್ತಿದ್ದಾರೆ. ಜೊತೆಗೆ ತನಿಖೆಯ ದಿಕ್ಕುತಪ್ಪಿಸುತ್ತಿದ್ದಾರೆ. ಇಷ್ಟೆಲ್ಲ ನಡೆಯುತ್ತಿದರೂ ಎಸ್ ಐ ಟಿ ಅಧಿಕಾರಿಗಳು ಯಾಕೆ ಕಣ್ಮುಚ್ಚಿ ಕುಳಿತಿವೆ ಎಂದು ಕಿಡಿಕಾರಿದ್ದಾರೆ.
ಅಲ್ಲದೇ ಸಿಡಿ ಪ್ರಕರಣ ಕೋರ್ಟ್ ನಿಗಾದಲ್ಲಿ ವಿಚಾರಣೆ ನಡೆಸಬೇಕೆಂದು ಕೋರಿ ಹೈಕೋರ್ಟ್ ಗೆ ಮೊರೆ ಹೋಗುತ್ತೇವೆ ಎಂದು ಜಗದೀಶ್ ತಿಳಿಸಿದ್ದಾರೆ.