ನವದೆಹಲಿ: ಭಾರತೀಯ ರೈಲ್ವೆಯ ಉತ್ತರ ಮಧ್ಯ ರೈಲ್ವೆ(NCR) ಅಪ್ರೆಂಟಿಸ್ ಹುದ್ದೆಗಳಿಗೆ ನೇಮಕಾತಿ ಅಧಿಸೂಚನೆ ಬಿಡುಗಡೆ ಮಾಡಿದ್ದು, ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಏಪ್ರಿಲ್ 16 ಕೊನೆಯ ದಿನವಾಗಿದೆ.
ಮಾರ್ಚ್ 17 ರಿಂದ ನೋಂದಣಿ ಆರಂಭವಾಗಿದ್ದು, ಏಪ್ರಿಲ್ 16 ಅರ್ಜಿ ಸಲ್ಲಿಕೆಗೆ ಕೊನೆ ದಿನವಾಗಿದೆ. ಅಭ್ಯರ್ಥಿಗಳು ನೇಮಕಾತಿ ಮಾಹಿತಿ, ಶೈಕ್ಷಣಿಕ ಅರ್ಹತೆ ಸೇರಿದಂತೆ ವಿವರಗಳಿಗೆ mponline.gov.in ಅಧಿಕೃತ ವೆಬ್ ಸೈಟ್ ಗಮನಿಸಬಹುದಾಗಿದೆ.
ಫಿಟ್ಟರ್ 286, ವೆಲ್ಡರ್ 11, ಮೆಕಾನಿಕ್ 84, ಕಾರ್ಪೆಂಟರ್ 11, ಎಲೆಕ್ಟ್ರಿಷಿಯನ್ 88 ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ. 10ನೇ ತರಗತಿ ಉತ್ತೀರ್ಣರಾದ ಕನಿಷ್ಠ ಶೇಕಡ 50 ರಷ್ಟು ಅಂಕಗಳೊಂದಿಗೆ ತತ್ಸಮಾನ ಪರೀಕ್ಷೆಯಲ್ಲಿ ಪಾಸಾದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಮಾನ್ಯತೆ ಪಡೆದ ಕೈಗಾರಿಕಾ ತರಬೇತಿ ಸಂಸ್ಥೆಯಿಂದ ಸಂಬಂಧಿಸಿದ ಟ್ರೇಡ್ ಗಳಲ್ಲಿ ಐಟಿಐ ಪ್ರಮಾಣ ಪತ್ರ ಹೊಂದಿರಬೇಕು. ಆಯ್ಕೆಯಾದ ಎಲ್ಲಾ ಅಭ್ಯರ್ಥಿಗಳಿಗೆ ರೈಲ್ವೆ ಮಂಡಳಿ ಸೂಚನೆ ಅನ್ವಯ ಸ್ಟೈಫಂಡ್ ನೀಡಲಾಗುವುದು.
ನೋಂದಣಿ ಸಮಯದಲ್ಲಿ ಅಭ್ಯರ್ಥಿಯು 100 ರೂ.ಗಳ ಅರ್ಜಿ ಶುಲ್ಕ ಮತ್ತು 70 ರೂ.ಗಳ ಪೋರ್ಟಲ್ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಆಯ್ಕೆಯಾದ ಅಭ್ಯರ್ಥಿಗಳ ಮೆರಿಟ್ ಪಟ್ಟಿಯನ್ನು ನಾರ್ತ್ ಸೆಂಟ್ರಲ್ ರೈಲ್ವೆ(ಎನ್‌ಸಿಆರ್) ವೆಬ್‌ಸೈಟ್‌ನಲ್ಲಿ ncr.indianrailway.gov.in ನಲ್ಲಿ ಅಪ್‌ಲೋಡ್ ಮಾಡಲಾಗುತ್ತದೆ. ಅರ್ಹತಾ ಪಟ್ಟಿಯಲ್ಲಿ ಸೇರ್ಪಡೆಗೊಂಡ ಅಭ್ಯರ್ಥಿಗಳಿಗೆ ಅಂಚೆ ಮೂಲಕ ತಿಳಿಸಲಾಗುವುದು. ಹೆಚ್ಚಿನ ಮಾಹಿತಿಗಾಗಿ ಆಸಕ್ತ ಅರ್ಹ ಅಭ್ಯರ್ಥಿಗಳು mponline.gov.in ಮತ್ತು ncr.indianrailway.gov.in ವೀಕ್ಷಿಸಬಹುದಾಗಿದೆ ಎಂದು ಹೇಳಲಾಗಿದೆ.