ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರಿಗೆ ಅಪರಿಮಿತ ಅಭಿಮಾನಿಗಳಿದ್ದಾರೆ, ಅದರಲ್ಲೂ ಸುಧೀರ್ ಎಂಬ ಬಿಹಾರ ಮೂಲದ ಶಿಕ್ಷಕ ಸಚಿನ್ ಅವರ ‘ಸೂಪರ್ ಫ್ಯಾನ್’.
ಹತ್ತಾರು ವರ್ಷಗಳಿಂದ ಕ್ರಿಕೆಟ್ ಪಂದ್ಯಾವಳಿ ವೇಳೆ ತಮ್ಮ ಮೈ ಮೇಲೆ ಭಾರತ ತಂಡವನ್ನು ಹುರಿದುಂಬಿಸುವಂತೆ ಬಣ್ಣ ಬಳಿದುಕೊಂಡು ಕೈಯಲ್ಲಿ ಭಾರತದ ಧ್ವಜ ಹಿಡಿದು ಮೈದಾನದಲ್ಲಿ ಗಮನ ಸೆಳೆದವರು ಸುಧೀರ್.
ಕತ್ತಲೆಯಲ್ಲಿ ‘ಸ್ಮಾರ್ಟ್ ಫೋನ್’ ಬಳಸುವವರು ಒಮ್ಮೆ ಓದಿ ಈ ಸುದ್ದಿ
ಸಚಿನ್ ಅವರ ಪಕ್ಕಾ ಅಭಿಮಾನಿಯಾದ ಈತ ಶುಕ್ರವಾರ ಪುನಃ ಸುದ್ದಿಯಾಗಿದ್ದಾರೆ. ಪುಣೆಯಲ್ಲಿ ನಡೆದ ಭಾರತ – ಇಂಗ್ಲೆಂಡ್ ಕ್ರಿಕೆಟ್ ಪಂದ್ಯಾವಳಿ ವೇಳೆ ಈ ಸುಧೀರ್, ಮೈದಾನದಿಂದ ಅನತಿ ದೂರದ ಗುಡ್ಡದ ಮೇಲೆ ನಿಂತಿರುವುದು ಕ್ಯಾಮರಾದಲ್ಲಿ ಸೆರೆಯಾಗಿದೆ. ತಮ್ಮ ಎಂದಿನ ಮೈಮೇಲೆ ಬರಹ- ಬಣ್ಣ ಬಳಿದುಕೊಂಡು ಧ್ವಜ ಬೀಸಿ ಅವರು ಭಾರತ ತಂಡವನ್ನು ಹುರಿದುಂಬಿಸುತ್ತಿದ್ದರು.
ಕೆ.ಎಲ್. ರಾಹುಲ್ ಶತಕ ಸಿಡಿಸಿದ ಬಳಿಕ ಅವರು ಕ್ರೀಡಾಂಗಣದ ಕ್ಯಾಮರಾ ಕಣ್ಣಿಗೆ ಬಿದ್ದಿದ್ದಾರೆ. ಕೊರೊನಾ ಕಾರಣಕ್ಕೆ ಪ್ರೇಕ್ಷಕರಿಗೆ ಮೈದಾನದಲ್ಲಿ ಪ್ರವೇಶ ನೀಡಿರಲಿಲ್ಲ. ಆದರೂ ಅಭಿಮಾನಿಗಳು ಮಾತ್ರ ಮೈದಾನದ ಸುತ್ತಮುತ್ತಲ ಎತ್ತರ ಪ್ರದೇಶದಲ್ಲಿ ನಿಂತು ಪಂದ್ಯಾವಳಿ ಕಣ್ತುಂಬಿಕೊಂಡರು.
https://www.instagram.com/p/CMxP-62ruTa/?utm_source=ig_web_copy_link