alex Certify ಸಿನಿಮಾ ನೋಡಿ ಹಣ ಗಳಿಸಲು ಇಲ್ಲಿದೆ ‘ಬಂಪರ್’ ಅವಕಾಶ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಿನಿಮಾ ನೋಡಿ ಹಣ ಗಳಿಸಲು ಇಲ್ಲಿದೆ ‘ಬಂಪರ್’ ಅವಕಾಶ

ವೆಬ್​ಸೈಟ್​ವೊಂದು ಜೇಮ್ಸ್​ ಬಾಂಡ್​ ಅಭಿಮಾನಿಗಳಿಗೆ ಭರ್ಜರಿ ಆಫರ್​ ನೀಡಿದ್ದು ಎಲ್ಲಾ 24 ಜೇಮ್ಸ್ ಬಾಂಡ್​ ಸಿನಿಮಾ ವೀಕ್ಷಿಸಿದ ವೀಕ್ಷಕರಿಗೆ 72568.30 ರೂಪಾಯಿ ಬಹುಮಾನದ ರೂಪದಲ್ಲಿ ನೀಡೋದಾಗಿ ಹೇಳಿದೆ. ಮುಂಬರುವ ‘ನೋ ಟೈಮ್​ ಟು ಡೈ’ ರಿಲೀಸ್​​ಗೂ ಮುನ್ನ ವೆಬ್​ಸೈಟ್​ ಈ ಭರ್ಜರಿ ಆಫರ್​ ನೀಡಿದೆ.

NerdBear.com ಎಂಬ ವೆಬ್​ಸೈಟ್​ನಲ್ಲಿ 1962 ರಿಂದ 2015ರವರೆಗಿನ 24 ಜೇಮ್ಸ್ ಬಾಂಡ್​ ಸಿನಿಮಾಗಳನ್ನ ಇಡಲಾಗಿದ್ದು ಈ ಎಲ್ಲಾ ಸಿನಿಮಾಗಳನ್ನ ವೀಕ್ಷಿಸಿದವರಿಗೆ ಈ ಬಹುಮಾನ ಸಿಗಲಿದೆ. ಈ ಫ್ರಾಂಚೈಸಿಯ 25ನೇ ಸಿನಿಮಾ ನೋ ಟೈಂ ಟು ಡೈ ಸೆಪ್ಟೆಂಬರ್​ 30ರಂದು ರಿಲೀಸ್​ ಆಗಲಿದೆ.

ಈ ಎಲ್ಲಾ ಸಿನಿಮಾಗಳನ್ನ ವೀಕ್ಷಿಸಿದವರಿಗೆ 72568.30 ರೂಪಾಯಿ ನಗದು. 100 ಡಾಲರ್​​ ಮೌಲ್ಯ ಅಮೆಜಾನ್​ ಗಿಫ್ಟ್ ಹಾಗೂ 50 ಡಾಲರ್​ ಮೌಲ್ಯದ ಎಎಂಸಿ ಗಿಫ್ಟ್ ಕಾರ್ಡ್​ ಸಿಗಲಿದೆ. ಆಸಕ್ತ ಅಭ್ಯರ್ಥಿಗಳು ಅರ್ಜಿಯನ್ನ ಸಲ್ಲಿಸಬೇಕು. ಈ ಅರ್ಜಿಯಲ್ಲಿ ತಾವೇಕೆ ಜೇಮ್ಸ್ ಬಾಂಡ್​ ಅಭಿಮಾನಿಯಾಗಿದ್ದೇವೆ ಅನ್ನೋದಕ್ಕೆ ಸೂಕ್ತ ಕಾರಣ ನೀಡಬೇಕು.

ಆಯ್ಕೆಯಾದ ಅಭ್ಯರ್ಥಿಗಳು 30 ದಿನಗಳಲ್ಲಿ 24 ಜೇಮ್ಸ್ ಬಾಂಡ್​ ಸಿನಿಮಾವನ್ನ ವೀಕ್ಷಿಸಬೇಕು. ಇದರಲ್ಲಿ ಒಟ್ಟು 51 ಗಂಟೆ ಅವಧಿಯ ಸಿನಿಮಾ ಇದೆ. ಆಯ್ಕೆಯಾದ ಅಭ್ಯರ್ಥಿಗಳು ಡಾ. ನೋ (1962), ಫ್ರಮ್ ರಷ್ಯಾ ವಿತ್​ ಲವ್ (1963), ಗೋಲ್ಡ್ ಫಿಂಗರ್ (1964), ಥಂಡರ್​ಬಾಲ್​ (1965), ಯು ಓನ್ಲಿ ಲಿವ್​​ ಟ್ವೈಸ್ (1967), ಆನ್ ಹರ್ ಮೆಜೆಸ್ಟಿಸ್ ಸೀಕ್ರೆಟ್ ಸರ್ವಿಸ್ (1969), ಡೈಮಂಡ್ಸ್ ಆರ್ ಫಾರೆವರ್ (1971), ಲೈವ್ & ಲೆಟ್ ಡೈ (1973), ದಿ ಮ್ಯಾನ್ ವಿಥ್ ದಿ ಗೋಲ್ಡನ್ ಗನ್ (1974), ದಿ ಸ್ಪೈ ಹೂ ಲವ್ಡ್ ಮಿ (1977), ಮೂನ್‌ರೇಕರ್ (1979), ಫಾರ್ ಯುವರ್ ಐಸ್ ಓನ್ಲಿ (1981), ಆಕ್ಟೋಪಸ್ಸಿ (1983), ಎ ವ್ಯೂ ಟು ಎ ಕಿಲ್ ( 1985), ದಿ ಲಿವಿಂಗ್ ಡೇಲೈಟ್ಸ್ (1987), ಲೈಸೆನ್ಸ್ ಟು ಕಿಲ್ (1989), ಗೋಲ್ಡನ್ ಐ (1995), ಟುಮಾರೊ ನೆವರ್ ಡೈಸ್ (1997), ದಿ ವರ್ಲ್ಡ್ ಈಸ್ ನಾಟ್ ಇನಫ್ (1999), ಡೈ ಅನದರ್ ಡೇ (2002), ಕ್ಯಾಸಿನೊ ರಾಯಲ್ (2006) , ಕ್ವಾಂಟಮ್ ಆಫ್ ಸೊಲೇಸ್ (2008), ಸ್ಕೈಫಾಲ್ (2012) ಮತ್ತು ಸ್ಪೆಕ್ಟರ್ (2015) ಸಿನಿಮಾಗಳನ್ನ ವೀಕ್ಷಿಸಬೇಕು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...