ಐ ಫೋನ್ ಖರೀದಿ ಮಾಡೋದು ಅಂದರೆ ಹುಡುಗಾಟಿಕೆಯಲ್ಲ. ಭಾರೀ ಮೊತ್ತದ ಹಣವನ್ನ ಫೋನ್ಗಳ ಮೇಲೆ ವ್ಯಯಿಸೋಕೆ ನೀವು ತಯಾರಿದ್ದೀರಿ ಅಂತಾದ್ರೆ ಮಾತ್ರ ಐ ಫೋನ್ ಖರೀದಿ ಮಾಡೋಕೆ ಸಾಧ್ಯ.
ಆದರೆ ಥೈಲ್ಯಾಂಡ್ ಯುವಕನೊಬ್ಬ ಅತ್ಯಂತ ಕಡಿಮೆ ದರಕ್ಕೆ ಐ ಫೋನ್ ಖರೀದಿ ಮಾಡೋಕೆ ಹೋಗಿ ಪೇಚಿಗೆ ಸಿಲುಕಿದ್ದಾನೆ. ಅಂದಹಾಗೆ ಈತನಿಗೆ ಇ ಕಾಮರ್ಸ್ ಸಂಸ್ಥೆ ಯಾವುದೇ ಮೋಸ ಮಾಡಿಲ್ಲ. ಬದಲಾಗಿ ಈತನ ಎಡವಟ್ಟಿನಿಂದಲೇ ಈ ರೀತಿ ಆಗಿದೆ.
ಇ ಮಾರುಕಟ್ಟೆಯೊಂದರಲ್ಲಿ ಐ ಫೋನ್ ಅತ್ಯಂತ ಕಡಿಮೆ ದರಕ್ಕೆ ಮಾರಾಟಕ್ಕೆ ಇರೋದನ್ನ ಯುವಕ ಗಮನಿಸಿದ್ದ. ಈ ಅವಕಾಶವನ್ನ ಮಿಸ್ ಮಾಡಿಕೊಳ್ಳಲೇಬಾರದು ಅಂತಾ ಯುವಕ ಅದನ್ನ ಬುಕ್ ಮಾಡಿದ್ದಾನೆ. ಆದರೆ ಆ ಪ್ರಾಡಕ್ಟ್ ಮನೆಗೆ ಡೆಲಿವರಿಯಾಗುತ್ತಿದ್ದಂತೆಯೇ ಯುವಕನಿಗೆ ಏನೋ ಮಿಸ್ಟೇಕ್ ಆಗಿದೆ ಎಂಬ ಅನುಮಾನ ಶುರುವಾಗಿದೆ.
ಮೊಬೈಲ್ ಫೋನ್ ಬಾಕ್ಸ್ ಒಂದು ಅಂಗೈಯಷ್ಟು ದೊಡ್ಡ ಇರುತ್ತೆ. ಆದರೆ ಈತನಿಗೆ ಸಿಕ್ಕ ಬಾಕ್ಸ್ ಹೆಚ್ಚು ಕಡಿಮೆ ಆತನಷ್ಟೇ ಉದ್ದ ಇತ್ತು. ಈ ಬಾಕ್ಸ್ ತೆರೆದು ನೋಡಿದ ಬಳಿಕ ಅಲ್ಲಿ ಐ ಫೋನ್ ಆಕೃತಿಯ ಟೇಬಲ್ ಇರೋದು ಕಂಡು ಬಂದಿದೆ.
ಅಂದಹಾಗೆ ಇದರಲ್ಲಿ ಇ ಮಾರುಕಟ್ಟೆ ಕಂಪನಿಯದ್ದು ಯಾವುದೇ ತಪ್ಪಿಲ್ಲ. ಯುವಕ ಸರಿಯಾಗಿ ಪ್ರಾಡಕ್ಟ್ ಮಾಹಿತಿಯನ್ನ ಓದದ ಕಾರಣ ಈ ಎಡವಟ್ಟು ಸಂಭವಿಸಿದೆ. ಯುವಕ ಫೋಟೋಗಳನ್ನ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ.