ಏಪ್ರಿಲ್ 1 ರಿಂದ ಚುನಾವಣಾ ಬಾಂಡ್ಗಳ ಮಾರಾಟ ನಡೆಯಲಿದ್ದು, ಇದಕ್ಕೆ ತಡೆ ನೀಡಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ.
ಪ್ರಶ್ಚಿಮ ಬಂಗಾಳ, ಕೇರಳ, ಆಸ್ಸಾಂ, ಪಾಂಡಿಚೇರಿಗಳಲ್ಲಿ ಇನ್ನೇನು ಕೆಲವೇ ದಿನಗಳಲ್ಲಿ ವಿಧಾನಸಭಾ ಚುನಾವಣೆ ನಡೆಯುವ ಹಿನ್ನೆಲೆ ಈ ತೀರ್ಪಿನ ಮೇಲೆ ಸಂಪೂರ್ಣ ದೇಶವೇ ಕಣ್ಣಿಟ್ಟಿತ್ತು.
ವಿಧಾನಸಭಾ ಚುನಾವಣೆಗಳ ಸಂದರ್ಭದಲ್ಲಿ ಬಾಂಡ್ಗಳನ್ನ ಮಾರಾಟ ಮಾಡುವ ಮೂಲಕ ರಾಜಕೀಯ ಪಕ್ಷಗಳು ಬೇನಾಮಿ ಕಂಪನಿಗಳಿಂದ ಆರ್ಥಿಕ ನೆರವನ್ನ ಪಡೆಯುತ್ತವೆ. ಇದರಿಂದ ಚುನಾವಣೆಯಲ್ಲಿ ಅಕ್ರಮ ಹಣದ ಬಳಕೆಯಾಗಬಹುದು ಎಂಬ ಆತಂಕದ ಹಿನ್ನೆಲೆ ಎನ್ಜಿಓ ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್, ಸುಪ್ರೀಂ ಕೋರ್ಟ್ ಮೊರೆ ಹೋಗಿತ್ತು.
ಈ ಸಂಬಂಧ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎಸ್.ಎ. ಬೋಬ್ಡೆ ನೇತೃತ್ವದ ಪೀಠ ಚುನಾವಣಾ ಬಾಂಡ್ ಮಾರಾಟಕ್ಕೆ ತಡೆ ನೀಡಲು ನಿರಾಕರಿಸಿದೆ.