ತುಮಕೂರು: ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಇದೀಗ ಹೊಸ ವರಸೆ ಆರಂಭಿಸಿದ್ದಾರೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಸರಕಾರದಲ್ಲಿ ನಾನು ಮಂತ್ರಿಯಾಗಲ್ಲ ಎಂದು ಹೇಳಿದ್ದಾರೆ.
ತುಮಕೂರಿನ ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿದ ಯತ್ನಾಳ್ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ನನಗೆ ಡಿಸಿಎಂ ಮಾಡ್ತೀನಿ, ಇಂಧನ, ಜಲಸಂಪನ್ಮೂಲ ಇಲಾಖೆ ಕೊಡ್ತೀನಿ, ಗೃಹ, ಬೆಂಗಳೂರು ನಗರಾಭಿವೃದ್ಧಿ ಕೊಡ್ತೀನಿ ಎಂದರೂ ನಾನು ಬಿ.ಎಸ್.ವೈ ಸಂಪುಟದಲ್ಲಿ ಮಂತ್ರಿಯಾಗಲ್ಲ. ಇದು ನನ್ನ ಭೀಷ್ಮ ಪ್ರತಿಜ್ಞೆ ಎಂದು ಹೇಳಿದ್ದಾರೆ.
ಪಕ್ಷೇತರ ಅಭ್ಯರ್ಥಿ ನೀಡಿರುವ ‘ಭರವಸೆ’ ನೋಡಿ ಬೆಚ್ಚಿಬಿದ್ದ ಮತದಾರರು…!
ಸಿಎಂಗೆ ಶಾಸಕರ ದೂರು ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ನನ್ನ ವಿರುದ್ಧ ಯಾವೊಬ್ಬ ಶಾಸಕನೂ ಸಹಿ ಹಾಕಿಲ್ಲ. ಯಾರು ಸಹಿ ಹಾಕಿದ್ದಾಗಿ ಹೇಳಿದ್ದಾರೋ ಅವರೂ ಕೂಡ ಸಹಿ ಹಾಕಿಲ್ಲ. ಅವರ ಹೇಳಿಕೆಗಳು ಬದಲಾಗಿದೆ. ಶಾಸಕರು ಸಹಿ ಮಾಡಿರುವುದು ಪ್ರತಿ ಕ್ಷೇತ್ರಕ್ಕೆ 25 ಲಕ್ಷ ಅನುದಾನ ನೀಡಬೇಕು ಅಂತಾ ಎಂದು ತಿಳಿಸಿದರು.