ನವದೆಹಲಿ: ಆಧಾರ್ ಕಾರ್ಡ್ ಕಡ್ಡಾಯ ಬಳಕೆ ಕುರಿತಂತೆ ಕೇಂದ್ರ ಸರ್ಕಾರದಿಂದ ಹೊಸ ಅಧಿಸೂಚನೆ ಹೊರಡಿಸಲಾಗಿದೆ. ಇನ್ನು ಮುಂದೆ ಕೆಲವು ಸೇವೆಗಳಿಗೆ ಆಧಾರ್ ಕಾರ್ಡ್ ನಿಯಮದಿಂದ ವಿನಾಯಿತಿ ನೀಡಲಾಗಿದೆ.
ಜೀವನ್ ಪ್ರಮಾಣ ಪತ್ರ ಸಲ್ಲಿಕೆಗಾಗಿ ಆಧಾರ್ ಕಡ್ಡಾಯವಲ್ಲ. ಪಿಂಚಣಿದಾರರು ಆಧಾರ್ ಕಾರ್ಡ್ ತೋರಿಸಿ ಜೀವಂತವಿರುವ ಕುರಿತಾಗಿ ಪ್ರಮಾಣಪತ್ರ ನೀಡುವುದು ಕಡ್ಡಾಯವಾಗಿದ್ದು, ಅದನ್ನು ಬದಲಿಸಿ ಸ್ವಯಂಪ್ರೇರಿತವಾಗಿ ಇಚ್ಛಿಸಿದಲ್ಲಿ ಮಾತ್ರ ನೀಡಬಹುದು ಎನ್ನಲಾಗಿದೆ.
ಸರ್ಕಾರಿ ಕಚೇರಿಗಳಲ್ಲಿ ಬಯೋಮೆಟ್ರಿಕ್ ಹಾಜರಾತಿ ವ್ಯವಸ್ಥೆಯಲ್ಲಿ ಕೂಡ ಆಧಾರ್ ಸಂಖ್ಯೆ ವಿನಾಯಿತಿ ನೀಡಲಾಗಿದೆ. ಸರ್ಕಾರಿ ಕಚೇರಿಗಳಲ್ಲಿ ನೌಕರರ ಹಾಜರಾತಿಗೆ ಸಂದೇಶ್ ಆಪ್ ವಿನ್ಯಾಸಗೊಳಿಸಲಾಗಿದೆ. ಇದಕ್ಕೆ ಆಧಾರ್ ಪರಿಶೀಲನೆಯನ್ನು ಸ್ವಯಂ ಪ್ರೇರಿತವಾಗಿ ಮಾಡಲಾಗಿರುವುದರಿಂದ ಆಧಾರ್ ಕಡ್ಡಾಯವಲ್ಲ ಎಂದು ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವಾಲಯದ ಇತ್ತೀಚಿನ ಅಧಿಸೂಚನೆಯಲ್ಲಿ ಹೇಳಲಾಗಿದೆ.