ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಬೆಲೆ ಗಗನಕ್ಕೇರಿದೆ. ಈ ವರ್ಷ ಸಬ್ಸಿಡಿ ಸಿಲಿಂಡರ್ ಬೆಲೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 225 ರೂಪಾಯಿ ಏರಿಕೆ ಕಂಡಿದೆ. 14.2 ಕೆ.ಜಿ ಎಲ್ಪಿಜಿ ಸಿಲಿಂಡರ್ ಬೆಲೆ 819 ರೂಪಾಯಿಯಾಗಿದೆ. ದುಬಾರಿ ಬೆಲೆಯ ಸಿಲಿಂಡರನ್ನು 119 ರೂಪಾಯಿಗೆ ಖರೀದಿಸುವ ಅವಕಾಶ ಸಿಗ್ತಿದೆ.
ಯಸ್, ಪೇಟಿಎಂ, ಕ್ಯಾಶ್ಬ್ಯಾಕ್ ಮೂಲಕ ಗ್ರಾಹಕರಿಗೆ ಅಗ್ಗದ ಬೆಲೆಗೆ ಸಿಲಿಂಡರ್ ಖರೀದಿಗೆ ಅವಕಾಶ ನೀಡ್ತಿದೆ. ಪೇಟಿಎಂ ಮೂಲಕ ಸಿಲಿಂಡರ್ ಬುಕ್ ಮಾಡಿದ್ರೆ 700 ರೂಪಾಯಿವರೆಗೆ ಕ್ಯಾಶ್ಬ್ಯಾಕ್ ಸಿಗಲಿದೆ. ಪೇಟಿಎಂ ನಿಮ್ಮ ಮೊಬೈಲ್ ನಲ್ಲಿಲ್ಲವೆಂದ್ರೆ ಮೊದಲು ಗೂಗಲ್ ಪೇಗೆ ಹೋಗಿ ಅಪ್ಲಿಕೇಷನ್ ಡೌನ್ ಲೋಡ್ ಮಾಡಿ. ನಂತ್ರ ರಿಚಾರ್ಜ್/ಬಿಲ್ ಪೇಮೆಂಟ್ ಆಯ್ಕೆಯನ್ನು ಆಯ್ದುಕೊಳ್ಳಿ. ಅಲ್ಲಿ ಬುಕ್ ಸಿಲಿಂಡರ್ ಮೇಲೆ ಕ್ಲಿಕ್ ಮಾಡಿ. ಯಾವ ಕಂಪನಿ ಸಿಲಿಂಡರ್ ಎಂಬುದನ್ನು ಆಯ್ಕೆ ಮಾಡಿ, ನೋಂದಾಯಿತ ಮೊಬೈಲ್ ನಂಬರ್ ಅಥವಾ ಸಿಲಿಂಡರ್ ಐಡಿ ನಂಬರ್ ಹಾಕಿ. ನಂತ್ರ ಪೇಮೆಂಟ್ ಆಯ್ಕೆ ಆಯ್ದುಕೊಳ್ಳುವ ಮೊದಲು ‘FIRSTLPG’ಪ್ರೋಮೋ ಕೋಡ್ ಹಾಕಿ.
ಲಸಿಕೆಯಿಂದ ಮಹಿಳೆಯರಲ್ಲಿ ಅಡ್ಡ ಪರಿಣಾಮ ಹೆಚ್ಚು: ಅಧ್ಯಯನದಲ್ಲಿ ಬಯಲಾಯ್ತು ಮಾಹಿತಿ
ಪೇಟಿಎಂ ಮೂಲಕ ಮೊದಲ ಬಾರಿ ಎಲ್ ಪಿ ಜಿ ಸಿಲಿಂಡರ್ ಬುಕ್ ಮಾಡಿದವರಿಗೆ 700 ರೂಪಾಯಿವರೆಗೆ ಕ್ಯಾಶ್ಬ್ಯಾಕ್ ಸಿಗಲಿದೆ. ಪೇಮೆಂಟ್ ಮಾಡಿದ ಕ್ಯಾಶ್‌ಬ್ಯಾಕ್ ಸ್ಕ್ರ್ಯಾಚ್ ಕಾರ್ಡ್ ಸಿಗಲಿದೆ. ಈ ಸ್ಕ್ರ್ಯಾಚ್ ಕಾರ್ಡನ್ನು 7 ದಿನಗಳಲ್ಲಿ ಬಳಸಬೇಕಾಗುತ್ತದೆ.
ಇದಲ್ಲದೆ ಇಂಡೇನ್ ಎಲ್ಪಿಜಿ ಗ್ರಾಹಕರು ಅಮೆಜಾನ್ ಪೇ ಮೂಲಕ ಎಲ್ಪಿಜಿ ಗ್ಯಾಸ್ ಸಿಲಿಂಡರ್ ಬುಕ್ ಮಾಡಿದ್ರೆ 50 ರೂಪಾಯಿ ಕ್ಯಾಶ್ಬ್ಯಾಕ್ ಸಿಗಲಿದೆ. ಈ ಎಲ್ಲ ಕ್ಯಾಶ್ಬ್ಯಾಕ್ ಕೇವಲ ಮಾರ್ಚ್ 31ರವರೆಗೆ ಮಾತ್ರ ಲಭ್ಯವಿದೆ. ಕಡಿಮೆ ದರದಲ್ಲಿ ಸಿಲಿಂಡರ್ ಖರೀದಿಗೆ ಇನ್ನು 7 ದಿನ ಮಾತ್ರ ಅವಕಾಶವಿದೆ.