alex Certify ಖಾಸಗಿ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್​: ಆತ್ಮಹತ್ಯೆಗೆ ಶರಣಾದ ತಾಯಿ – ಮಗಳು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಖಾಸಗಿ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್​: ಆತ್ಮಹತ್ಯೆಗೆ ಶರಣಾದ ತಾಯಿ – ಮಗಳು

40 ವರ್ಷದ ತಾಯಿ ಹಾಗೂ 22 ವರ್ಷದ ಮಗಳು ಒಟ್ಟಿಗೆ ಆತ್ಮಹತ್ಯೆಗೆ ಶರಣಾದ ದಾರುಣ ಘಟನೆ ಉತ್ತರ ಪ್ರದೇಶ ಗೋಂಡಾ ಜಿಲ್ಲೆಯಲ್ಲಿ ನಡೆದಿದೆ. 22 ವರ್ಷದ ಪುತ್ರಿಯ ಅಶ್ಲೀಲ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆದ ಪರಿಣಾಮ ತಾಯಿ ಹಾಗೂ ಮಗಳು ಈ ನಿರ್ಧಾರ ಕೈಗೊಂಡಿದ್ದಾರೆ ಎನ್ನಲಾಗಿದೆ.

ಮೃತ 22 ವರ್ಷದ ಮಹಿಳೆ ಈ ಹಿಂದೆ ಸತ್ಯಂ ಎಂಬಾತನ ಜೊತೆ ಪ್ರೇಮ ಸಂಬಂಧವನ್ನ ಹೊಂದಿದ್ದಳು ಎನ್ನಲಾಗಿದೆ. ಆದರೆ ಆಕೆ ಬೇರೊಬ್ಬನನ್ನ ವಿವಾಹದ ಬಳಿಕ ಸತ್ಯಂ ಆಕೆಗೆ ಕಿರುಕುಳ ನೀಡೋಕೆ ಆರಂಭಿಸಿದ್ದ. ಆಕೆಯ ಅಶ್ಲೀಲ ವಿಡಿಯೋವೊಂದನ್ನ ಪತಿಗೆ ಕಳುಹಿಸಿದ್ದ ಮಾತ್ರವಲ್ಲದೇ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾನೆ.

ಮೃತ 22 ವರ್ಷದ ಮಹಿಳೆ ಕಳೆದ ವರ್ಷ ಡಿಸೆಂಬರ್​ನಲ್ಲಿ ವಿವಾಹವಾಗಿದ್ದಳು. 22 ವರ್ಷದ ಮಹಿಳೆ ಗರ್ಭಿಣಿ ಆಗಿದ್ದಳು ಎನ್ನಲಾಗಿದೆ. ಈ ವಿಡಿಯೋ ವೈರಲ್​ ಆದ ಬಳಿಕ ಮನನೊಂದ ತಾಯಿ – ಮಗಳು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...