ಬೆಂಗಳೂರು: ರಾಜ್ಯದಲ್ಲಿ ದಿನದಿಂದ ದಿನಕ್ಕೆ ಮಹಾಮಾರಿ ಕೊರೊನಾ ಅಟ್ಟಹಾಸ ಹೆಚ್ಚುತ್ತಿದೆ. ಅದರಲ್ಲೂ ಬೆಂಗಳೂರಿನಲ್ಲಿ ನಾಲ್ಕು ತಿಂಗಳ ಬಳಿಕ ನಿನ್ನೆ ಅತಿ ಹೆಚ್ಚು ಕೇಸ್ ದಾಖಲಾಗಿದೆ. ಹೀಗಾಗಿ ರಾಜ್ಯದಲ್ಲಿ ಜನರು ಇನ್ನೂ ಎರಡು ತಿಂಗಳ ಕಾಲ ಬಹಳ ಎಚ್ಚಕೆಯಿಂದ ಇರಬೇಕು ಎಂದರು.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಕೊರೊನಾ ನಿಯಂತ್ರಣಕ್ಕೆ ಸರ್ಕಾರ ಹೊಸ ನಿಯಮ ಜಾರಿ ಮಾಡಿದೆ. ಕೋವಿಡ್ ಸಾವು ತಪ್ಪಿಸುವುದೇ ನಮ್ಮ ಪ್ರಮುಖ ಗುರಿ. ಹೀಗಾಗಿ ರಾಜ್ಯದ ಜನರು ಸಹಕಾರ ನೀಡಬೇಕು. 45 ವರ್ಷ ಮೇಲ್ಪಟ್ಟ ಎಲ್ಲರೂ ಕಡ್ಡಾಯವಾಗಿ ಕೊರೊನಾ ಲಸಿಕೆ ಹಾಕಿಸಿಕೊಳ್ಳುವಂತೆ ತಿಳಿಸಿದರು.
ರಾಜಕ್ಕೆ 4 ಲಕ್ಷ ಡೋಸ್ ಕೊರೊನಾ ಲಸಿಕೆ ಆಗಮನ: ಸಚಿವ ಸುಧಾಕರ್
ರೂಪಾಂತರಿ ವೈರಸ್ 700ಕ್ಕೂ ಹೆಚ್ಚು ಪ್ರಕರಣ ದಾಖಲಾಗಿವೆ. ಇದರಿಂದ ಸೋಂಕು ಹರಡುವ ವೇಗ ಹೆಚ್ಚು. ಆದರೆ ರಾಜ್ಯದಲ್ಲಿ ಈವರೆಗೆ ಇಂತಹ ಪ್ರಕರಣ ದಾಖಲಾಗಿಲ್ಲ. ಒಬ್ಬರಿಗೆ ಕೊರೊನಾ ದೃಢವಾದರೆ 20 ಜನ ಪ್ರಾಥಮಿಕ ಸಂಪರ್ಕಿತರಿಗೆ 24 ಗಂಟೆಗಳಲ್ಲಿ ಟೆಸ್ಟ್ ಮಾಡಿಸಲಾಗುತ್ತದೆ. ಸೋಂಕು ಹರಡದಂತೆ ಜನರೇ ಮುಂಜಾಗೃತಾ ಕ್ರಮಗಳನ್ನು ಕೈಗೊಂಡು ಇನ್ನೂ ಎರಡು ತಿಂಗಳ ಕಾಲ ಎಚ್ಚರಿಕೆಯಿಂದ ಇರಬೇಕು ಎಂದು ಹೇಳಿದರು.