ಬೆಂಗಳೂರು: ಕೊರೋನಾ ಲಸಿಕೆ ಪಡೆದ ಪುರುಷರಿಗಿಂತ ಮಹಿಳೆಯರಲ್ಲಿ ಅಡ್ಡಪರಿಣಾಮ ಹೆಚ್ಚಾಗಿರುತ್ತದೆ ಎಂದು ಅಧ್ಯಯನದಲ್ಲಿ ಗೊತ್ತಾಗಿದೆ. ಬೆಂಗಳೂರಿನ ಬ್ಯಾಪ್ಟಿಸ್ಟ್ ಆಸ್ಪತ್ರೆ ವೈದ್ಯರು ನಡೆಸಿದ ಅಧ್ಯಯನದಲ್ಲಿ ಕೊರೋನಾ ಸೈಡ್ ಎಫೆಕ್ಟ್ ಮಹಿಳೆಯರಲ್ಲಿ ಅಧಿಕವಾಗಿ ಕಂಡು ಬಂದಿದೆ.
ಯಾವುದೇ ಲಸಿಕೆ ಪಡೆದಾಗ ಸಣ್ಣ ಪ್ರಮಾಣದ ಸೈಡ್ ಎಫೆಕ್ಟ್ ಆಗುತ್ತೆ. ಆಸ್ಪತ್ರೆಯ ಕಮ್ಯುನಿಟಿ ಮೆಡಿಸನ್ ವಿಭಾಗದಿಂದ ಲಸಿಕೆ ಪಡೆದವರ ಬಗ್ಗೆ ಅಧ್ಯಯನ ಕೈಗೊಳ್ಳಲಾಗಿದ್ದು ಮಹಿಳೆಯರಿಗೆ ಅಡ್ಡಪರಿಣಾಮ ಇರುವುದು ಗೊತ್ತಾಗಿದೆ. ಲಸಿಕೆ ಪಡೆದ ನಂತರದಲ್ಲಿ ಮಹಿಳೆಯರಿಗೆ ಮೈಕೈ ನೋವು, ಸುಸ್ತು ಕಾಣಿಸಿಕೊಂಡಿದೆ. ತುಟಿ ಊತ ಸೇರಿದಂತೆ ಸಣ್ಣಪುಟ್ಟ ಆರೋಗ್ಯ ಸಮಸ್ಯೆಗಳು ಕೂಡ ಕಾಣಿಸಿಕೊಂಡಿದ್ದು, ಲಸಿಕೆ ಪಡೆದ ಶೇಕಡ 78 ಜನರಲ್ಲಿ ಅಡ್ಡಪರಿಣಾಮ ಕಾಣಿಸಿದೆ.
ಬ್ಯಾಪ್ಟಿಸ್ಟ್ ಆಸ್ಪತ್ರೆಗೆ ಸಿಬ್ಬಂದಿಯ ಮೇಲೆ ಲಸಿಕೆ ಪಡೆದ ನಂತರ ಅಧ್ಯಯನ ನಡೆಸಲಾಗಿದೆ. 1500 ಸಿಬ್ಬಂದಿ ಪೈಕಿ 753 ಜನರಿಗೆ ಲಸಿಕೆ ನೀಡಲಾಗಿದ್ದು, ಗೂಗಲ್ ಫಾರಂ ನೀಡಿ ಉತ್ತರ ಪಡೆಯಲಾಗಿದೆ. ಮಹಿಳೆಯರಿಗೆ ಸಣ್ಣ ಸೈಡ್ ಎಫೆಕ್ಟ್ ಆಗಿರುವ ಬಗ್ಗೆ ಹೇಳಿಕೊಂಡಿದ್ದಾರೆ. ಲಸಿಕೆ ಉತ್ತಮವಾಗಿದೆ ಎಂದೂ ಅವರು ತಿಳಿಸಿದ್ದಾರೆ. ಯಾವುದೇ ಲಸಿಕೆ ಪಡೆದರೂ ಕೂಡ ಸಣ್ಣಪುಟ್ಟ ಸೈಡ್ ಎಫೆಕ್ಟ್ ಇದ್ದೇ ಇರುತ್ತದೆ ಎನ್ನುವುದು ತಜ್ಞವೈದ್ಯರ ಅಭಿಪ್ರಾಯವಾಗಿದೆ. ಅದರಲ್ಲಿಯೂ ಮಹಿಳೆಯರಿಗೆ ಬೇಗನೆ ಪರಿಣಾಮವುಂಟಾಗುತ್ತದೆ. ಇದಕ್ಕೆ ಗಾಬರಿ ಪಡಬೇಕಾದ ಅಗತ್ಯವಿರುವುದಿಲ್ಲ. ಮೂರು ದಿನದ ನಂತರ ಎಲ್ಲವೂ ಸರಿಯಾಗಲಿದೆ ಎನ್ನುವುದು ಅವರ ಅಭಿಪ್ರಾಯವಾಗಿದೆ.