ಎಲೆಕ್ಟ್ರಿಕ್ ವಾಹನಗಳನ್ನು ಖರೀದಿ ಮಾಡಲು ದೇಶವಾಸಿಗಳಲ್ಲಿ ಭಾರೀ ಉತ್ಸಾಹ ಕಂಡುಬರುತ್ತಿದ್ದು, ಇದೇ ಹಿನ್ನೆಲೆಯಲ್ಲಿ ಎಲೆಕ್ಟ್ರಿಕ್ ವಾಹನಗಳನ್ನು ಓಡಿಸಲು ಅಗತ್ಯವಿರುವ ಬ್ಯಾಟರಿಗಳನ್ನು ಭಾರತದಲ್ಲೇ ಉತ್ಪಾದಿಸುವ ವ್ಯವಸ್ಥೆಗಳನ್ನು ಮಾಡಲು ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಉದ್ಯಮಿಗಳಿಗೆ ಮನವಿ ಮಾಡಿಕೊಂಡಿದ್ದಾರೆ.
ಸದ್ಯದ ಮಟ್ಟಿಗೆ; ದೇಶದಲ್ಲಿ ಮಾರಾಟವಾಗುತ್ತಿರುವ ವಾಹನಗಳ ಪೈಕಿ 1%ಗಿಂತ ಕಡಿಮೆ ಎಲೆಕ್ಟ್ರಿಕ್ ವಾಹನಗಳಾಗಿವೆ. ಆದರೆ ಮುಂಬರುವ ದಿನಗಳಲ್ಲಿ ಈ ಪ್ರಮಾಣವು 5% ತಲುಪುವ ಸಾಧ್ಯತೆ ಇದೆ. 2019-20ರಲ್ಲಿ 3.8 ಲಕ್ಷ ಎಲೆಕ್ಟ್ರಿಕ್ ವಾಹನಗಳು ಭಾರತದಲ್ಲಿ ಮಾರಾಟವಾಗಿದ್ದು, ಇವುಗಳಲ್ಲಿ 58%ನಷ್ಟು ಕಡಿಮೆ ವೇಗದ ಇ3ಡಬ್ಲ್ಯೂ, 40%ನಷ್ಟು ಇ2ಡಬ್ಲ್ಯೂ ವಾಹನಗಳಾಗಿವೆ ಎಂದು ಕಾರ್ದೇಖೋ ಸಮೀಕ್ಷೆ ತಿಳಿಸಿದೆ.
‘ಮಾಸ್ಕ್’ ಧರಿಸದವರಿಗೆ ದಂಡ ವಿಧಿಸಲು ಇವರುಗಳಿಗೆಲ್ಲ ಇದೆ ಅಧಿಕಾರ
ಸಮೀಕ್ಷೆಯಲ್ಲಿ ಭಾಗಿಯಾದ 66%ರಷ್ಟು ಮಂದಿ ಪೆಟ್ರೋಲ್/ಡೀಸೆಲ್ ಚಾಲಿತ ವಾಹನಗಳ ಬದಲಿಗೆ ಎಲೆಕ್ಟ್ರಿಕ್ ವಾಹನಗಳನ್ನು ಬಳಸಲು ಉತ್ಸುಕತೆ ತೋರಿದ್ದಾರೆ.