ರೋಡ್ ಸೇಫ್ಟಿ ವರ್ಲ್ಡ್ ಸಿರೀಸ್ನಲ್ಲಿ ಅದ್ಭುತ ಪ್ರದರ್ಶನ ತೋರಿ ಇಂಡಿಯಾ ಲೆಜೆಂಡ್ಸ್ ಕಾರಣರಾದ ಯುವರಾಜ್ ಸಿಂಗ್ ಅಭಿಮಾನಿಗಳ ಮನವನ್ನ ಮತ್ತೊಮ್ಮೆ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ.
ಇದೀಗ ಸೆಲೆಬ್ರಿಟಿ ಹೇರ್ಸ್ಟೈಲಿಸ್ಟ್ ಹಕೀಮ್ ಆಲಿಮ್ ಅವರ ಸಲೂನ್ಗೆ ಭೇಟಿ ನೀಡಿ ತಮ್ಮ ಕೇಶಕ್ಕೆ ಹೊಸ ರೂಪ ಕೊಡಿಸಿದ್ದಾರೆ.
ಇನ್ಸ್ಟಾಗ್ರಾಂನಲ್ಲಿ ತಮ್ಮ ಹೊಸ ಫೋಟೋವನ್ನ ಶೇರ್ ಮಾಡಿರುವ ಯುವರಾಜ್ ಸಿಂಗ್, ಹೇರ್ ಆನ್ ಪಾಯಿಂಟ್ ಬ್ರದರ್ ಎಂದು ಶೀರ್ಷಿಕೆ ನೀಡಿದ್ದಾರೆ.
ರೋಡ್ ಸೇಫ್ಟಿ ವರ್ಲ್ಡ್ ಸಿರೀಸ್ನಲ್ಲಿ ಯುವರಾಜ್ ಸಿಂಗ್ 41 ಎಸೆತಗಳಲ್ಲಿ 60 ರನ್ಗಳನ್ನ ಗಳಿಸುವಲ್ಲಿ ಯಶಸ್ವಿಯಾಗಿದ್ರು. ಸಚಿನ್ ತೆಂಡೂಲ್ಕರ್ ನೇತೃತ್ವದ ಇಂಡಿಯಾ ಲೆಜೆಂಡ್ಸ್ ತಂಡ 66 ರನ್ಗಳ ಅಂತರದಲ್ಲಿ ಶ್ರೀಲಂಕಾ ಲೆಜೆಂಡ್ಸ್ ತಂಡವನ್ನ ಮಣಿಸುವಲ್ಲಿ ಯಶಸ್ವಿಯಾಗಿತ್ತು.
https://www.instagram.com/p/CMy3i9UjBPq/?utm_source=ig_web_copy_link