alex Certify ಗ್ರಾಹಕರ ಗಮನಕ್ಕೆ: ಮಾ. 27 ರಿಂದ ಏ. 4ರವರೆಗೆ 7 ದಿನಗಳ ಕಾಲ ಇರೋದಿಲ್ಲ ಬ್ಯಾಂಕಿಂಗ್​ ಸೇವೆ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗ್ರಾಹಕರ ಗಮನಕ್ಕೆ: ಮಾ. 27 ರಿಂದ ಏ. 4ರವರೆಗೆ 7 ದಿನಗಳ ಕಾಲ ಇರೋದಿಲ್ಲ ಬ್ಯಾಂಕಿಂಗ್​ ಸೇವೆ..!

ಖಾಸಗಿ ಹಾಗೂ ಸರ್ಕಾರಿ ಬ್ಯಾಂಕ್​ಗಳು ಮಾರ್ಚ್ 27ನೇ ತಾರೀಖಿನಿಂದ ಏಪ್ರಿಲ್​ 4ನೇ ತಾರೀಖಿನ ಒಳಗೆ ಬ್ಯಾಂಕ್​ಗಳು ಕೇವಲ 2 ದಿನ ಮಾತ್ರ ಸೇವೆ ನೀಡಲಿವೆ. ಶನಿವಾರ, ಭಾನುವಾರ, ಹೋಳಿ ಹಬ್ಬ , ಗುಡ್​ ಫ್ರೈ ಡೇ ಹೀಗೆ ನಾನಾ ಕಾರಣದ ಹಿನ್ನೆಲೆ ಬ್ಯಾಂಕ್​ಗಳು ಕ್ಲೋಸ್​ ಇರಲಿವೆ.

ಈ 9 ದಿನದ ಅವಧಿಯಲ್ಲಿ 7 ದಿನಗಳ ಕಾಲ ಬ್ಯಾಂಕ್​ ಸೇವೆ ನಿಮಗೆ ಸಿಗೋದಿಲ್ಲ. ಮಾರ್ಚ್ 27 ರಿಂದ ಏಪ್ರಿಲ್​ 4ರ ಒಳಗೆ ಬ್ಯಾಂಕ್​ ಸೇವೆ ನಿಮಗೆ ಕೇವಲ ಮಾರ್ಚ್ 30 ಹಾಗೂ ಏಪ್ರಿಲ್​ 3ರಂದು ಮಾತ್ರ ಸಿಗಲಿದೆ.

ಆದರೆ ಈ ರಜೆಗಳು ರಾಜ್ಯದಿಂದ ರಾಜ್ಯಕ್ಕೆ ಬೇರೆ ರೀತಿಯಲ್ಲಿ ಇರುತ್ತವೆ. ಕರ್ನಾಟಕದಲ್ಲಿ ಇದರಲ್ಲಿ ಕೆಲವೊಂದು ರಜೆಗಳು ಬ್ಯಾಂಕುಗಳಿಗೆ ಅನ್ವಯವಾಗುವುದಿಲ್ಲ. ಹೀಗಾಗಿ ಇಲ್ಲಿ ಆ ದಿನಗಳಂದು ಬ್ಯಾಂಕುಗಳು ಎಂದಿನಂತೆ ಕಾರ್ಯ ನಿರ್ವಹಿಸಲಿವೆ.

ಮಾರ್ಚ್ 27 : ನಾಲ್ಕನೇ ಶನಿವಾರ
ಮಾರ್ಚ್ 28 : ಭಾನುವಾರ
ಮಾರ್ಚ್​ 29 : ಹೋಳಿ ಹಬ್ಬ
ಮಾರ್ಚ್ 31 : 2020-21ನೇ ಸಾಲಿನ ಆರ್ಥಿಕ ವರ್ಷದ ಕೊನೆಯ ದಿನ
ಏಪ್ರಿಲ್​ 1 : ಬ್ಯಾಂಕ್​ ಅಕೌಂಟಿಂಗ್​ ಕಾರ್ಯ
ಏಪ್ರಿಲ್​ 2 : ಗುಡ್​ ಫ್ರೈ ಡೇ
ಏಪ್ರಿಲ್​ 4: ಭಾನುವಾರ

 

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...