alex Certify ʼಲಾಕ್ ​ಡೌನ್ʼ​ ಸಮಯದಲ್ಲಿ ರದ್ದಾದ ಟಿಕೆಟ್​ಗಳ ಮರುಪಾವತಿ ಕುರಿತು ʼಇಂಡಿಗೋʼದಿಂದ ಮಹತ್ವದ ಹೇಳಿಕೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಲಾಕ್ ​ಡೌನ್ʼ​ ಸಮಯದಲ್ಲಿ ರದ್ದಾದ ಟಿಕೆಟ್​ಗಳ ಮರುಪಾವತಿ ಕುರಿತು ʼಇಂಡಿಗೋʼದಿಂದ ಮಹತ್ವದ ಹೇಳಿಕೆ

ಕಳೆದ ವರ್ಷ ಲಾಕ್​​ಡೌನ್​​ನಿಂದಾಗಿ ತಮ್ಮ ವಿಮಾನಯಾನ ಸೇವೆಯನ್ನ ಸ್ಥಗಿತಗೊಳಿಸಿದ್ದರಿಂದ ಈಗಾಗಲೇ ಬುಕ್ಕಿಂಗ್​ ಮಾಡಿದ್ದ ಗ್ರಾಹಕರಿಗೆ 99.5 ಪ್ರತಿಶತ ಹಣವನ್ನ ನಾವು ಮರುಪಾವತಿ ಮಾಡಿದ್ದೇವೆ ಎಂದು ಇಂಡಿಗೋ ಹೇಳಿದೆ.

ಕಳೆದ ವರ್ಷ ಲಾಕ್​ಡೌನ್​ ಕಾರಣದಿಂದಾಗಿ ವಿಮಾನಯಾನ ಮಾಡಲು ಸಾಧ್ಯವಾಗದವರಿಗೆ ಅವರ ಹಣ ಮರುಪಾವತಿ ಮಾಡಿ ಎಂದು ಸುಪ್ರೀಂ ಕೋರ್ಟ್ ಆದೇಶ ನೀಡಿತ್ತು.

ದೇಶದ ಅತಿದೊಡ್ಡ ಖಾಸಗಿ ವಿಮಾನಯಾನ ಸಂಸ್ಥೆಯಾಗಿರುವ ಇಂಡಿಗೋ, ಸುಪ್ರೀಂ ಕೋರ್ಟ್​ನ ಈ ಆದೇಶ ಸಂಬಂಧ ಸ್ಪಷ್ಟನೆ ನೀಡಿದ್ದು, ಕಳೆದ ವರ್ಷ ಮಾರ್ಚ್ ತಿಂಗಳಲ್ಲಿ ಸಂಪೂರ್ಣ ಲಾಕ್​ಡೌನ್​ ಜಾರಿಯಾಗಿದ್ದರಿಂದ ಕ್ಯಾನ್ಸಲ್​ ಆದ ವಿಮಾನಗಳಲ್ಲಿ ಟಿಕೆಟ್ ಕಾಯ್ದಿರಿಸಿದ್ದ ಗ್ರಾಹಕರ ಹಣವನ್ನ ತ್ವರಿತ ಗತಿಯಲ್ಲಿ ರಿಫಂಡ್​ ಮಾಡುತ್ತಿದ್ದೇವೆ ಎಂದು ಹೇಳಿದೆ.

ಇನ್ನು ಈ ವಿಚಾರವಾಗಿ ಮಾತನಾಡಿದ ಇಂಡಿಗೋ ವಕ್ತಾರ, ನಮ್ಮ ವಿಮಾನಯಾನ ಸಂಸ್ಥೆ ಈಗಾಗಲೇ 1030 ಕೋಟಿ ರೂಪಾಯಿ ಮೊತ್ತವನ್ನ ಮರುಪಾವತಿ ಮಾಡಿದೆ. ಇದು ಗ್ರಾಹಕರಿಗೆ ಮರುಪಾವತಿ ಮಾಡಬೇಕಾದ ಒಟ್ಟು ಮೊತ್ತದ 99.5 ಪ್ರತಿಶತದಷ್ಟಿದೆ. ಉಳಿದ ಗ್ರಾಹಕರ ಬಳಿ ಬ್ಯಾಂಕ್​ ಖಾತೆ ವಿವರ ಪಡೆಯಲಾಗುತ್ತಿದ್ದು, ಶೀಘ್ರದಲ್ಲೇ ಎಲ್ಲರಿಗೂ ಅವರ ಹಣ ಮರುಪಾವತಿಯಾಗಲಿದೆ ಎಂದು ಹೇಳಿದ್ರು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...