ಭುವನೇಶ್ವರ: ವೇಶ್ಯಾವಾಟಿಕೆಗೆ ಒಪ್ಪದ ಪತ್ನಿ ಖಾಸಗಿ ಅಂಗಕ್ಕೆ ಪತಿ ಮದ್ಯದ ಬಾಟಲಿ ತುರುಕಿದ ಅಮಾನವೀಯ ಘಟನೆ ಒಡಿಶಾದಲ್ಲಿ ನಡೆದಿದೆ.
ಇಂತಹ ಕೃತ್ಯವೆಸಗಿದ ಆಟೋ ಚಾಲಕ ಚಂದನ್ ಆಚಾರ್ಯನ ವಿರುದ್ಧ ಚಂದ್ರಶೇಖರಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. 10 ವರ್ಷಗಳ ಹಿಂದೆ ದಂಪತಿಯ ಮದುವೆಯಾಗಿದ್ದು, 5 ವರ್ಷದ ಮಗಳು ಇದ್ದಾಳೆ. ಪದ್ಮಾವತಿ ವಿಹಾರ ಏರಿಯಾದಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದು, ಹಣಕ್ಕಾಗಿ ಪತ್ನಿಗೆ ಪೀಡಿಸುತ್ತಿದ್ದ ಚಂದನ್ ಆಚಾರ್ಯ ತನ್ನ ಮನೆಯಲ್ಲಿ ವೇಶ್ಯಾವಾಟಿಕೆ ದಂಧೆ ನಡೆಸಲು ತೀರ್ಮಾನಿಸಿದ್ದ. ಇದಕ್ಕೆ ಆತನ ಪತ್ನಿ ವಿರೋಧ ವ್ಯಕ್ತಪಡಿಸಿದ್ದಳು. ಇದರಿಂದ ಆಕ್ರೋಶಗೊಂಡ ಆರೋಪಿ ಕಬ್ಬಿಣದ ರಾಡ್ ನಿಂದ ಪತ್ನಿಯನ್ನು ಥಳಿಸಿ ಖಾಸಗಿ ಅಂಗಕ್ಕೆ ಮದ್ಯದ ಬಾಟಲಿ ಹಾಕಿ ಹಿಂಸೆ ನೀಡಿದ್ದಾನೆ. ಪತ್ನಿ ಪ್ರಜ್ಞೆ ತಪ್ಪಿದ್ದು, ಆಕೆಯ ತಾಯಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಮುಂದಿನ ಕ್ರಮಕೈಗೊಂಡಿದ್ದಾರೆ.