alex Certify ಭೋಜನ ಪ್ರಿಯರಿಗೆ ಸೇವೆ ನೀಡಲು ಚಾಲಕ ರಹಿತ ಫ್ಲೈಯಿಂಗ್ ಟ್ಯಾಕ್ಸಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಭೋಜನ ಪ್ರಿಯರಿಗೆ ಸೇವೆ ನೀಡಲು ಚಾಲಕ ರಹಿತ ಫ್ಲೈಯಿಂಗ್ ಟ್ಯಾಕ್ಸಿ

ಚಾಲಕರಿಲ್ಲದ ಏರ್‌ ಟ್ಯಾಕ್ಸಿಯಲ್ಲಿ ಪ್ರಯಾಣ ಮಾಡುವುದನ್ನು ಊಹೆ ಮಾಡಿಕೊಂಡರೇ ಮೈ ಜುಮ್ಮನ್ನುತ್ತೆ ಅಲ್ಲವೇ?

ಈ ಕಾನ್ಸೆಪ್ಟ್‌ಗೆ ಜೀವ ತುಂಬಿರುವ ಇಟಲಿಯ ಎಹಾಂಗ್ ಹೋಲ್ಡಿಂಗ್ಸ್‌ ವಿಮಾನಯಾನ ಸಂಸ್ಥೆ ಹಾಗೂ ಕಲಾವಿದರಾದ ಗಿಯಾನ್‌ಕಾರ್ಲೋ ಸಮೂಹ ಕೈಜೋಡಿಸಿ ಪ್ರವಾಸಿಗರಿಗೆ 100 ಅಡಿ ಎತ್ತರದಲ್ಲಿ ಐಷಾರಾಮಿ ಭೋಜನದ ವ್ಯವಸ್ಥೆ ಮಾಡುತ್ತಿವೆ.

ಇದಕ್ಕೆಂದೇ ವಿಶೇಷವಾದ ’ವರ್ಟಿಪೋರ್ಟ್ಸ್’ ಎಂಬ 100 ಅಡಿ ಎತ್ತರದ ಟವರ್‌ಗಳನ್ನು ನಿರ್ಮಿಸಲಾಗಿದ್ದು, ಇವುಗಳ ಮೇಲೆ ಚಾಲಕರಹಿತ ಹೆಲಿಕಾಪ್ಟರ್‌ಗಳನ್ನು ಲ್ಯಾಂಡ್ ಮಾಡಬಹುದಾಗಿದೆ. ಈ ಟವರ್‌ಗಳಿಗೆ ಶುದ್ಧ ಇಂಧನದ ಪೂರೈಕೆ ಇದ್ದು, ಪರಿಸರ ಸ್ನೇಹಿಯಾಗಿವೆ.

ಫ್ಲೈಯಿಂಗ್ ಟ್ಯಾಕ್ಸಿಗಳ ಮೂಲಕ ಪ್ರವಾಸಿಗರನ್ನು ಅವರ ಹೊಟೇಲ್‌ಗಳಿಂದ ಈ ಭೋಜನಾಸ್ಥಳಕ್ಕೆ ಕರೆದುಕೊಂಡು ಬಂದು ರೋಮ್‌ನ ದೃಶ್ಯಸಿರಿಯ ಪಕ್ಷಿನೋಟವನ್ನು ಆನಂದಿಸಲು ಅನುವು ಮಾಡಿಕೊಡುವ ಯೋಜನೆ ರೋಮ್ ಮೂಲದ ಈ ಕಂಪನಿಗಳದ್ದಾಗಿದೆ.

ಪ್ರೀತಿ ಪಾತ್ರರು ಸತ್ತಾಗ ಮಾತ್ರ ಭೂಮಿ ಮೇಲೆ ಕಾಲಿಡ್ತಾರೆ ಇಲ್ಲಿನ ಜನ

ವರ್ಟಿಪೋರ್ಟ್ ಟವರ್‌ಗಳನ್ನು ಉಕ್ಕು ಹಾಗೂ ಮರಗಳಿಂದ ನಿರ್ಮಿಸಲಾಗುತ್ತಿದ್ದು, ಆಫ್ರಿಕಾದ ಬೋಆಬ್ ಮರಗಳಿಂದ ಇವುಗಳ ವಿನ್ಯಾಸಕ್ಕೆ ಪ್ರೇರಣೆ ಪಡೆಯಲಾಗಿದೆ ಎಂದು ವಿನ್ಯಾಸಕರು ತಿಳಿಸಿದ್ದಾರೆ.

ಪ್ರತಿಯೊಂದು ಟವರ್‌ ಮೇಲೂ 2,153 ಚದರ ಅಡಿ ಜಾಗವಿರಲಿದ್ದು, ಕೆಫೆ, ವೇಟಿಂಗ್ ರೂಂ ಹಾಗೂ ರೆಸ್ಟೋರಂಟ್‌ಗಳು ಇರಲಿವೆ. ಈ ಜಾಗಕ್ಕೆ ಬರುವ ಮಂದಿ ಆ ಊರಿನ ದೃಶ್ಯಸಿರಿಯನ್ನು ಎಂಜಾಯ್ ಮಾಡಿಕೊಂಡು ಊಟ ಮಾಡಬಹುದಾಗಿದೆ.

ಟವರ್‌ಗಳಿಗೆ ವಿದ್ಯುತ್‌ ಒದಗಿಸಲು ಸೋಲಾರ್‌ ಫಲಕಗಳನ್ನು ಅಳವಡಿಸಲಾಗಿದ್ದು, ಫ್ಲೈಯಿಂಗ್ ಟ್ಯಾಕ್ಸಿಗಳಿಗೂ ಸಹ ಇದೇ ಮೂಲದಿಂದ ಚಾರ್ಜಿಂಗ್ ಮಾಡುವ ವ್ಯವಸ್ಥೆ ಹೊಂದಲಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...