ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಮೊದಲ ಏಕದಿನ ಪಂದ್ಯದ ಮೂಲಕ ಕ್ರುನಾಲ್ ಪಾಂಡ್ಯ ಅಂತರಾಷ್ಟ್ರೀಯ ಏಕದಿನ ಪಂದ್ಯಕ್ಕೆ ಪದಾರ್ಪಣೆ ಮಾಡಿದ್ದಾರೆ. ಕ್ರುನಾಲ್ ಚೊಚ್ಚಲ ಪಂದ್ಯದ ವೇಳೆ ಸಹೋದರ ಹಾರ್ದಿಕ್ ಪಾಂಡ್ಯ ಅವರನ್ನು ತಬ್ಬಿಕೊಂಡು ಶುಭಕೋರಿದ್ದಾರೆ.
ಕ್ರುನಾಲ್ ಪಾಂಡ್ಯಗೆ ಸಹೋದರ ಹಾರ್ದಿಕ್ ಪಾಂಡ್ಯ ಏಕದಿನ ಪಂದ್ಯದ ಕ್ಯಾಪ್ ನೀಡಿದ್ರು. ಈ ವೇಳೆ ಇಬ್ಬರು ಸಹೋದರರು ಭಾವುಕರಾದ್ರು. ಸಹೋದರರಿಬ್ಬರ ಭಾವುಕ ಕ್ಷಣದ ಫೋಟೋ ಹಾಗೂ ವಿಡಿಯೋವನ್ನು ಬಿಸಿಸಿಐ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದೆ.
ಏಕದಿನ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ ಕ್ರುನಾಲ್ ಪಾಂಡ್ಯ, ಆಕಾಶವನ್ನು ನೋಡುವ ಮೂಲಕ ತಂದೆಯನ್ನು ನೆನಪಿಸಿಕೊಂಡರು. ಈ ಸಂದರ್ಭದಲ್ಲಿ ಸಹೋದರನಿಗೆ ಹಾರ್ದಿಕ್ ಧೈರ್ಯ ನೀಡಿದ್ರು. ಸಹೋದರ ಹಾರ್ದಿಕ್ ಪಾಂಡ್ಯರಂತೆ ಕ್ರುನಾಲ್ ಪಾಂಡ್ಯ ಕೂಡ ಆಲ್ರೌಂಡರ್. ಸೀಮಿತ ಓವರ್ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿರುವ ಕ್ರುನಾಲ್, ಟೀಂ ಇಂಡಿಯಾದಲ್ಲಿ ನೆಲೆ ನಿಲ್ಲುವ ಸೂಚನೆ ನೀಡಿದ್ದಾರೆ.
29 ವರ್ಷದ ಕ್ರುನಾಲ್ ಪಾಂಡ್ಯ ಮುಂಬೈ ಇಂಡಿಯನ್ ಪರ 71 ಪಂದ್ಯಗಳಲ್ಲಿ 24.39 ಸರಾಸರಿಯಲ್ಲಿ 1000 ರನ್ ಗಳಿಸಿದ್ದಾರೆ. ಜೊತೆಗೆ 46 ವಿಕೆಟ್‌ಗಳನ್ನು ಪಡೆದಿದ್ದಾರೆ. ಎ ಪಂದ್ಯಗಳಲ್ಲಿ 1983 ರನ್ ಗಳಿಸಿ 80 ವಿಕೆಟ್ ಪಡೆದಿದ್ದಾರೆ. ಒಟ್ಟು 121 ಟಿ 20 ಪಂದ್ಯಗಳಲ್ಲಿ ಕ್ರುನಾಲ್ ಪಾಂಡ್ಯ 1524 ರನ್ ಮತ್ತು 89 ವಿಕೆಟ್ ಪಡೆದಿದ್ದಾರೆ.